ಬಾಲಿವುಡ್​ ನಟ ವರುಣ್​ ಧವನ್​ ಕಾರು ಚಾಲಕ ಮನೋಜ್ ಹೃದಯಾಘಾತದಿಂದ ನಿಧನ

ಬಾಲಿವುಡ್​ನ ಸ್ಟಾರ್​ ನಟ ವರುಣ್​ ಧವನ್​ ಅವರ ಕಾರು ಚಾಲಕ ಮನೋಜ್​ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ.

Published: 19th January 2022 01:38 PM  |   Last Updated: 19th January 2022 01:38 PM   |  A+A-


Varun Dhawan's driver Manoj

ಚಾಲಕನ ಜೊತೆ ವರುಣ್ ಧವನ್

Online Desk

ಬಾಲಿವುಡ್​ನ ಸ್ಟಾರ್​ ನಟ ವರುಣ್​ ಧವನ್​ ಅವರ ಕಾರು ಚಾಲಕ ಮನೋಜ್​ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ.

ಈ ವಿಷಯ ತಿಳಿದು ವರುಣ್​ ಧವನ್​ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಮಂಗಳವಾರ (ಜ.18) ಮನೋಜ್​ ನಿಧನರಾಗಿದ್ದು, ಅವರ ಕುಟುಂಬಕ್ಕೆ ವರುಣ್​ ಧವನ್​ ಬೆಂಬಲವಾಗಿ ನಿಂತಿದ್ದಾರೆ. 

ಬಹುಕಾಲದಿಂದ ವರುಣ್​ಗೆ ಕಾರು ಚಾಲಕನಾಗಿ ಮನೋಜ್​ ಕೆಲಸ ಮಾಡುತ್ತಿದ್ದರು. ಅವರ ಜೊತೆಗೆ ವರುಣ್​ ತುಂಬ ಆಪ್ತವಾಗಿದ್ದರು ಎನ್ನಲಾಗಿದೆ. ಹಾಗಾಗಿ, ಕಾರು ಚಾಲಕನ ನಿಧನದಿಂದ ವರುಣ್​ ಧವನ್​ ತೀವ್ರ ವಿಚಲಿತರಾಗಿದ್ದಾರೆ. 

ಮಂಗಳವಾರ ಜಾಹೀರಾತು ಚಿತ್ರೀಕರಣವೊಂದರ ಸಲುವಾಗಿ ಅವರನ್ನು ಡ್ರಾಪ್​ ಮಾಡಿದ ಬಳಿಕ ಮನೋಜ್​ಗೆ ಎದೆ ನೋವು ಕಾಣಿಸಿಕೊಂಡಿತು. ಆಗ ಅವರಿಗೆ ಹೃದಯಾಘಾತ ಸಂಭವಿಸಿತು. ಕೂಡಲೇ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರ ಜತೆ ವರುಣ್​ ಧವನ್​ ಕೂಡ ಇದ್ದರು. ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಮನೋಜ್​ ಮೃತರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಮನೋಜ್​ಗೆ ಎದೆನೋವು ಕಾಣಿಸಿಕೊಂಡ ತಕ್ಷಣ ವರುಣ್​ ಧವನ್​ ಅವರು ಚಿತ್ರೀಕರಣವನ್ನು ನಿಲ್ಲಿಸಿ ಆಸ್ಪತ್ರೆಯತ್ತ ಸಾಗಿದರು. ಆದರೆ ಮನೋಜ್​ ನಿಧನರಾಗಿದ್ದು ತಿಳಿದು ಅವರ ತೀವ್ರ ನೋವನುಭವಿಸಿದ್ದಾರೆ.. 


Stay up to date on all the latest ಬಾಲಿವುಡ್ news
Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp