ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ದಂಪತಿಗೆ ಮೊದಲ ಮಗು: ಅಭಿನಂದನೆ ತಿಳಿಸಿದ ಅನುಷ್ಕಾ ಶರ್ಮಾ
ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
Published: 26th January 2022 06:44 PM | Last Updated: 27th January 2022 01:16 PM | A+A A-

ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್
ಮುಂಬೈ: ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಈ ಖುಷಿ ಹಂಚಿಕೊಂಡ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವ ವಿಚಾರವನ್ನು ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಈ ಸಂದರ್ಭದಲ್ಲಿ ನಾನು ನನ್ನ ಕುಟುಂಬದ ಮೇಲೆ ಹೆಚ್ಚು ಗಮನವನ್ನು ಕೇಂದ್ರಕರಿಸಬೇಕಾಗಿದೆ. ಹಾಗಾಗಿ ನಮ್ಮ ವೈಯಕ್ತಿಕ ಸಮಯವನ್ನು ಗೌರವಿಸಬೇಕು ಎಂದು ಕೇಳಿಕೊಂಡಿದ್ದರು.
ಅಭಿನಂದನೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್. ನಿದ್ದೆಯಿಲ್ಲದ ರಾತ್ರಿಗಳು ಮತ್ತು ಸಾಟಿಯಿಲ್ಲದ ಸಂತೋಷ ಮತ್ತು ಪ್ರೀತಿಗಾಗಿ ಸಿದ್ಧರಾಗಿ. ಪುಟ್ಟ ಕಂದಮ್ಮಳಿಗೆ ಪ್ರೀತಿಯ ಶುಭ ಹಾರೈಕೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಹೆಣ್ಣು ಮಗುವಿನ ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ
ಇದೀಗ ಸಂತೋಷ, ಸಂಭ್ರಮದಲ್ಲಿರುವ ಪ್ರಿಯಾಂಕಾ ಮತ್ತು ನಿಕ್ ಜೋನಸ್ ದಂಪತಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಿಯಾಂಕಾ ಅವರ ಸೋದರಸಂಬಂಧಿ ಮೀರಾ ಕೂಡ ಸಂತೋಷವನ್ನು ವ್ಯಕ್ತಪಡಿಸಿದ್ದು, ಪ್ರಿಯಾಂಕಾ ಯಾವಾಗಲೂ ಬಹಳಷ್ಟು ಮಕ್ಕಳೊಂದಿಗೆ ಇರಲು ಬಯಸುತ್ತಾಳೆ. ಹಾಗಾಗಿ, ಅವರ ಜೀವನದಲ್ಲಿ ಆರಂಭವಾದ ಈ ಹೊಸ ಅಧ್ಯಾಯ ಕಂಡು ತುಂಬಾ ಸಂತಸವಾಗಿದೆ. ಅವಳು ತನ್ನ ಹೆಣ್ಣು ಮಗುವಿಗೆ ಸೂಪರ್ ತಾಯಿಯಾಗಲಿದ್ದಾಳೆ. ಪ್ರಿಯಾಂಕಾ ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಆದ್ದರಿಂದ, ತಾಯಿಯಾಗಿರುವುದು ಅವರ ಶಕ್ತಿಯುತ ಆತ್ಮದ ವಿಸ್ತರಣೆಯಾಗಿದೆ. ನಾವೆಲ್ಲರೂ ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.