ಖ್ಯಾತ ಗಾಯಕ ಕೆಕೆ ಹಠಾತ್ ನಿಧನ: ಕಂಬನಿ ಮಿಡಿದ ಚಿತ್ರರಂಗ, ಗಾಯಕರು
ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್(KK) ಅವರ ಹಠಾತ್ ನಿಧನ ಹಿನ್ನೆಲೆಯಲ್ಲಿ ಭಾರತೀಯ ಸಂಗೀತ ಉದ್ಯಮದ ಹಲವಾರು ಗಣ್ಯರು ಕೆಕೆ ಎಂದು ಖ್ಯಾತರಾದ ಕೃಷ್ಣಕುಮಾರ್ ಕುನ್ನತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
Published: 01st June 2022 09:31 AM | Last Updated: 01st June 2022 01:02 PM | A+A A-

ಬಾಲಿವುಡ್ ಗಾಯಕ ಕೆಕೆ
ಮುಂಬೈ: ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್(KK) ಅವರ ಹಠಾತ್ ನಿಧನ ಹಿನ್ನೆಲೆಯಲ್ಲಿ ಭಾರತೀಯ ಸಂಗೀತ ಉದ್ಯಮದ ಹಲವಾರು ಗಣ್ಯರು ಕೆಕೆ ಎಂದು ಖ್ಯಾತರಾದ ಕೃಷ್ಣಕುಮಾರ್ ಕುನ್ನತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಜನಪ್ರಿಯ ಗಾಯಕ ಮತ್ತು ಪದ್ಮಶ್ರೀ ಪುರಸ್ಕೃತ ಸೋನು ನಿಗಮ್ ಇನ್ಲ್ಟಾಗ್ರಾಮ್ ನಲ್ಲಿ, "ಕೆಕೆ ನನ್ನ ಸೋದರ, ಇನ್ನೂ ಮುಗಿದಿಲ್ಲ' ಎಂದು ಬರೆದಿದ್ದಾರೆ. ಜನಪ್ರಿಯ ಬಾಲಿವುಡ್ ಗೀತೆ 'ಮೆಹ್ಕಿ ಹವಾನ್ ಮೇ' ಅನ್ನು ಕೆಕೆ ಮತ್ತು ಸೋನು ನಿಗಮ್ ಇಬ್ಬರೂ ಒಟ್ಟಿಗೆ ಹಾಡಿದ್ದರು.
ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿರುವ ಗಾಯಕಿ ಶ್ರೇಯಾ ಘೋಷಾಲ್ ಅವರು ಟ್ವೀಟ್ ಮಾಡಿ, ಈ ಸುದ್ದಿ ಕೇಳಲು ಸಾಧ್ಯವಾಗುತ್ತಿಲ್ಲ. ನಿಶ್ಚೇಷ್ಟಿತ #KK ಏಕೆ! ಇದನ್ನು ಒಪ್ಪಿಕೊಳ್ಳಲು ತುಂಬಾ ಕಷ್ಟ! ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಹೆಸರಾಂತ ಗಾಯಕ, ಗೀತರಚನೆಕಾರ ಮತ್ತು ಸಂಗೀತ ಸಂಯೋಜಕ ಮತ್ತು ಪೆಂಟಾಗ್ರಾಮ್ ಎಂಬ ಭಾರತದ ಪ್ರಮುಖ ರಾಕ್ ಬ್ಯಾಂಡ್ನ ಗಾಯಕ ವಿಶಾಲ್ ದದ್ಲಾನಿ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಕಣ್ಣೀರು ನಿಲ್ಲುವುದಿಲ್ಲ. ಅವನು ಎಂತಹ ವ್ಯಕ್ತಿ. ಎಂತಹ ಧ್ವನಿ, ಎಂತಹ ಹೃದಯ, ಎಂತಹ ಮನುಷ್ಯ. #ಕೆಕೆ ಎಂದೆಂದಿಗೂ ಎಂದು ಟ್ವೀಟ್ ಮಾಡಿದ್ದಾರೆ.
ಕೆಕೆ ಅವರ ನಿಧನಕ್ಕೆ ಜನಪ್ರಿಯ ಗಾಯಕ ಮೋಹಿತ್ ಚೌಹಾಣ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ಕೆಕೆ... ನ್ಯಾಯೋಚಿತವಲ್ಲ, ನಿಮ್ಮ ಸಮಯವಲ್ಲ. ನಾವು ಕೊನೆಯ ಬಾರಿಗೆ ಒಟ್ಟಿಗೆ ಇದ್ದೆವು. ನೀವು ಹೇಗೆ ಹೋಗುತ್ತೀರಿ, ಇಷ್ಟೊಂದು ಆಘಾತ ನೀಡಿ, RIP KK. ಲವ್ ಯೂ ಎಂದು ಖ್ಯಾತ ಗಾಯಕ ಮೊಹಿತ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.
KK... not fair man. Not your time to go. This was the last time we were together to announce a tour together. How can you just go??? In shock. In grief. A ear dear friend, a brother is gone. RIP KK. Love you. pic.twitter.com/lCdwIRf3W6
— Mohit Chauhan (@_MohitChauhan) May 31, 2022
ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಮಂಗಳವಾರ ಸಂಜೆ ನಿಧನರಾದರು. ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಗಾಯಕನಿಗೆ ವೇದಿಕೆ ಮೇಲೆ ಹಾಡುವಾಗ ತೀವ್ರ ಅಸ್ವಸ್ಥವಾಯಿತು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದನ್ನೂ ಓದಿ: ಕೋಲ್ಕತಾ: ಸಂಗೀತ ಕಾರ್ಯಕ್ರಮದ ನಂತರ ಖ್ಯಾತ ಬಾಲಿವುಡ್ ಗಾಯಕ ಕೆಕೆ ಕುಸಿದು ಬಿದ್ದು ಸಾವು
ಕೆಕೆ ಅವರಿಗೆ ಕೇವಲ 54 ವರ್ಷ ವಯಸ್ಸಾಗಿತ್ತು. ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಕೈಟ್ಸ್ ಚಿತ್ರದ "ಜಿಂದಗಿ ದೋ ಪಾಲ್ ಕಿ", ಓಂ ಶಾಂತಿ ಓಂ ಚಿತ್ರದ "ಆಂಖೋನ್ ಮೇ ತೇರಿ", ಬಚ್ನಾ ಏ ಹಸೀನೋ ಚಿತ್ರದ "ಖುದಾ ಜಾನೆ", ಹಮ್ ಚಿತ್ರದ "ತಡಪ್ ತಡಪ್", ದಿಲ್ ದೇ ಚುಕೆ ಸನಮ್ ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದರು.