ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ವಿಶ್ವ ದರ್ಜೆಯ ಚಿತ್ರ: ಮೋಹನ್ ಭಾಗವತ್
ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್, 'ಸಾಮ್ರಾಟ್ ಪೃಥ್ವಿರಾಜ್' ಚಲನಚಿತ್ರವನ್ನು ವೀಕ್ಷಿಸಿದ್ದಾರೆ.
Published: 04th June 2022 03:43 PM | Last Updated: 04th June 2022 03:43 PM | A+A A-

ಅಕ್ಷಯ್ ಕುಮಾರ್-ಮೋಹನ್ ಭಾಗವತ್
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್, 'ಸಾಮ್ರಾಟ್ ಪೃಥ್ವಿರಾಜ್' ಚಲನಚಿತ್ರವನ್ನು ವೀಕ್ಷಿಸಿದ್ದಾರೆ.
ನಂತರ ಮಾತನಾಡಿರುವ ಅವರು, ಈಗ ಇತಿಹಾಸವನ್ನು ಭಾರತದ ದೃಷ್ಟಿಕೋನದಿಂದ ನೋಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಅಭಿನಯದ ಚಿತ್ರ ವಿಶ್ವ ದರ್ಜೆಯದ್ದಾಗಿದೆ ಎಂದು ಬಣ್ಣಿಸಿದರು. ಇದು ದೇಶವೇ ಹೆಮ್ಮೆ ಪಡುವಂತಹ ಚಿತ್ರವಾಗಿದ್ದು, ವಿಶ್ವ ಚಲನಚಿತ್ರ ನಿರ್ಮಾಣ ಕ್ಷೇತ್ರದೊಂದಿಗೆ ಹಂತ ಹಂತವಾಗಿ ನಡೆಯಲು ಈ ಚಿತ್ರ ಪ್ರೋತ್ಸಾಹ ನೀಡಿದೆ ಎಂದು ಭಾಗವತ್ ತಿಳಿಸಿದರು.
ವಿಶ್ವದ ಮೇಲೆ ಪ್ರಭಾವ ಬೀರಲಿರುವ ಚಿತ್ರದ ಬಗ್ಗೆ ಅವರು, 'ಚಿತ್ರ ನೋಡಿದ ನಂತರ, ಈ ಚಲನಚಿತ್ರದಲ್ಲಿ ವೀರರನ್ನು ಚಿತ್ರಿಸಿರುವಂತೆ ದೇಶದಾದ್ಯಂತ ಜನರು ಒಗ್ಗೂಡಿ, ಧೈರ್ಯಶಾಲಿ ಮತ್ತು ರಾಷ್ಟ್ರದ ಗೌರವಕ್ಕಾಗಿ ನಿಲ್ಲುತ್ತಾರೆ. ಸ್ಕ್ರೀನಿಂಗ್ ವೇಳೆ, ಉಪಸ್ಥಿತರಿದ್ದ ಅಕ್ಷಯ್ ಕುಮಾರ್ ಮತ್ತು ಡಾ. ಚಂದ್ರಪ್ರಕಾಶ್ ದ್ವಿವೇದಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಚಿತ್ರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮೋಹನ್ ಭಾಗವತ್ ಹೇಳಿದರು.
#WATCH | We used to read our history written by others. We are now looking at history from India's perspective: RSS chief Mohan Bhagwat said after watching Akshay Kumar-starrer period drama 'Samrat Prithviraj' in Delhi (03.06) pic.twitter.com/yTVf7Nc9ix
— ANI (@ANI) June 3, 2022
ಇತರ ಹಿರಿಯ ಆರ್ಎಸ್ಎಸ್ ನಾಯಕರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದ ಭಾಗವತ್ ಅವರು, 'ಇದು ಸತ್ಯ ಆಧಾರಿತ ಚಲನಚಿತ್ರವಾಗಿದೆ. ಇದು ಸರಿಯಾದ ಸಂದೇಶವನ್ನು ನೀಡುತ್ತದೆ. ಇದು ದೇಶಕ್ಕೆ ಇಂದು ಅಗತ್ಯವಿದೆ ಎಂದು ಹೇಳಿದರು. ಇಲ್ಲಿಯವರೆಗೆ ನಮ್ಮದೇ ಆದ ಇತಿಹಾಸವನ್ನು ಬೇರೆಯವರು ಬರೆದದ್ದನ್ನು ಓದುತ್ತಿದ್ದೆವು. ಈಗ ಇತಿಹಾಸವನ್ನು ಭಾರತದ ದೃಷ್ಟಿಕೋನದಿಂದ ನೋಡುತ್ತಿದ್ದೇವೆ ಎಂದರು.
ಯಶ್ ರಾಜ್ ಫಿಲ್ಮ್ಸ್ನ ಮೊದಲ ಐತಿಹಾಸಿಕ ಚಿತ್ರ 'ಸಾಮ್ರಾಟ್ ಪೃಥ್ವಿರಾಜ್' ನಿರ್ಭೀತ ಮತ್ತು ಬಲಿಷ್ಠ ಚಕ್ರವರ್ತಿಯ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ದಾಳಿಕೋರ ಮುಹಮ್ಮದ್ನಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದ ಸಾಮ್ರಾಟ್ ಪೃಥ್ವಿರಾಜ್ ಪಾತ್ರವನ್ನು ನಟ ಅಕ್ಷಯ್ ನಿರ್ವಹಿಸಿದ್ದಾರೆ. ಚಕ್ರವರ್ತಿ ಪೃಥ್ವಿರಾಜರ ಧೈರ್ಯ ಮತ್ತು ನಾಯಕತ್ವವು ಯುವ ಪೀಳಿಗೆಗೆ ಸ್ಫೂರ್ತಿ ನೀಡಿದೆ.
ಈ ಚಲನಚಿತ್ರ ನಟ ಅಕ್ಷಯ್ ಕುಮಾರ್ ಹೊರತುಪಡಿಸಿ, ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಅವರು, ಪೃಥ್ವಿರಾಜ್ ಅವರ ಪ್ರೀತಿಯ ಸಂಯೋಗಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ.