ಸೂಪರ್ ಸ್ಪ್ರೆಡರ್ ಈವೆಂಟ್ ಆಯ್ತಾ ಕರಣ್ ಜೋಹರ್ ಬರ್ತ್ ಡೇ ಪಾರ್ಟಿ: 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು

ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

Published: 06th June 2022 09:41 AM  |   Last Updated: 06th June 2022 09:41 AM   |  A+A-


Karan Johar

ಕರಣ್ ಜೋಹರ್

Online Desk

ಮುಂಬಯಿ: ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಬಾಲಿವುಡ್‌ ಸ್ಟಾರ್‌ ನಿರ್ದೇಶಕ ಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಪಾರ್ಟಿಗೆ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು.

ಸಿನಿಮಾರಂಗದ ಬಹುತೇಕ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಒಟ್ಟಾಗಿ ಒಂದೇ ಸೂರಿನಡಿ ಮಿಂಚಿದ್ದರು. ಇದೇ ವೇಳೆ ಹಲವರಿಗೆ ಕೋವಿಡ್‌ ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕರಣ್‌ ಜೋಹರ್‌ ಅವರು 50ನೇ ವರ್ಷದ ಜನ್ಮದಿನದ ಪಾರ್ಟಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದವರ ಪೈಕಿ 55 ಜನರಿಗೆ ಕೋವಿಡ್‌ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್‌ಗಳು ಹರಿದಾಡುತ್ತಿವೆ.  ಆದರೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲಿ ಯಾರು ಯಾರಿಗೆ ಕೋವಿಡ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಕರಣ್‌ ಜೋಹರ್‌ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Stay up to date on all the latest ಬಾಲಿವುಡ್ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp