
ಶಾರೂಖ್ ಖಾನ್-ಕತ್ರಿನಾ ಕೈಫ್
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಕತ್ರಿನಾ ಕೈಫ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಕತ್ರಿನಾ ಕೈಫ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಬಾಲಿವುಡ್ ನಲ್ಲಿ ಈಗಾಗಲೇ ಕಾರ್ತಿಕ್ ಆರ್ಯನ್, ಕತ್ರಿನಾ, ಆಡಿತ್ಯ ರಾಯ್ ಕಪೂರ್ ಅವರಿಗೆ ಕೋವಿಡ್-19 ಸೋಂಕು ತಗುಲಿದೆ.
ಇತ್ತೀಚೆಗಷ್ಟೇ ಅಕ್ಷಯ್ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದರು. ವರದಿಗಳ ಪ್ರಕಾರ ಅಬು ಧಾಬಿಯಲ್ಲಿ ನಡೆದ ಐಐಎಫ್ಎ-2022 ನಲ್ಲಿ ಕತ್ರಿನಾ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಕೋವಿಡ್-19 ಸೋಂಕಿನಿಂದ ಆಕೆ ಬಳಲುತ್ತಿದ್ದದ್ದೇ ಕಾರಣ ಎಂದು ತಿಳಿದುಬಂದಿದೆ.
ಶಾರೂಖ್ ಖಾನ್ ಪಠಾಣ್, ದುನ್ಕಿ, ಜವಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.