ಸಲ್ಮಾನ್ ಖಾನ್- ಕತ್ರಿನಾ ಅಭಿನಯದ ಟೈಗರ್-3, ರಿಲೀಸ್ ಡೇಟ್ ಔಟ್! 

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಟೈಗರ್-3 ಚಿತ್ರ ಮುಂದಿನ ವರ್ಷ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.
ಸಲ್ಮಾನ್ ಖಾನ್ - ಕತ್ರಿನಾ ಕೈಫ್
ಸಲ್ಮಾನ್ ಖಾನ್ - ಕತ್ರಿನಾ ಕೈಫ್

ಮುಂಬೈ:  ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಟೈಗರ್-3 ಚಿತ್ರ ಮುಂದಿನ ವರ್ಷ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.

ಯಶ್ ರಾಜ್ ಬ್ಯಾನರ್  ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಟೈಗರ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿದ್ದರೆ, ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಟೈಗರ್ -3 ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದ್ದು, ಚಿತ್ರ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಚಿತ್ರದಲ್ಲಿ ಕತ್ರಿನಾ ಸಾಕಷ್ಟು ಆ್ಯಕ್ಷನ್ ಮಾಡಿರುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

ಟೈಗರ್ 3 ಚಿತ್ರ ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಏಪ್ರಿಲ್ 21ಕ್ಕೆ ಬಿಡುಗಡೆಯಾಗಲಿದೆ. ಹಿಂದಿ ಮಾತ್ರವಲ್ಲದೇ ಬಹುಭಾಷಾ ಸಿನಿ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ತಮಿಳು ಮತ್ತು ತೆಲುಗಿನಲ್ಲೂ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com