ಪುತ್ರಿ ಮಾಲ್ತಿ ಮೇರಿಯ ಮತ್ತೊಂದು ಫೋಟೋ ಹಂಚಿಕೊಂಡ ಪ್ರಿಯಾಂಕ ಚೋಪ್ರಾ- ನಿಕ್ ಜೋನಾಸ್
ತನ್ನ ತಾಯಿ ಮಧು ಚೋಪ್ರಾ ಅವರ ಜನ್ಮ ದಿನಾಚರಣೆಯ ಅಂಗವಾಗಿ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿಯ ಇತ್ತೀಚಿನ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.
Published: 17th June 2022 03:34 PM | Last Updated: 17th June 2022 03:50 PM | A+A A-

ಮಗಳು-ತಾಯಿಯೊಂದಿಗೆ ಪ್ರಿಯಾಂಕ ಚೋಪ್ರಾ
ಮುಂಬೈ: ತನ್ನ ತಾಯಿ ಮಧು ಚೋಪ್ರಾ ಅವರ ಜನ್ಮ ದಿನಾಚರಣೆಯ ಅಂಗವಾಗಿ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿಯ ಇತ್ತೀಚಿನ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ತಾಯಿ ಮಧು ಚೋಪ್ರಾ ಅವರ ಪಕ್ಕದಲ್ಲಿ ಕುಳಿತಿದ್ದು, ಮಗು ಅಜ್ಜಿಯ ತೆಕ್ಕೆಯಲ್ಲಿದೆ.
ತಾಯಿಗೆ ಈ ಫೋಟೋ ಹಂಚಿಕೊಳ್ಳುವುದರ ಮೂಲಕ ಜನ್ಮದಿನದ ಶುಭಾಶಯ ತಿಳಿಸಿರುವ ಪ್ರಿಯಾಂಕ ಚೋಪ್ರಾ, ನೀವು ಮತ್ತೊಬ್ಬರನ್ನು ಪ್ರಭಾವಿಸುವಂತಹ ನಗೆಯನ್ನು ಬೀರುತ್ತೀರಿ, ಜೀವನೋತ್ಸಾಹದ ಮೂಲಕ ನೀವು ಸ್ಪೂರ್ತಿಯಾಗಿದ್ದೀರಿ, ನೀವು ಏಕಾಂಗಿಯಾಗಿ ಯುರೋಪ್ ಪ್ರವಾಸ ಕೈಗೊಂಡಿದ್ದು ನಾನು ಕಂಡ ಅತ್ಯುತ್ತಮವಾದ ಜನ್ಮದಿನದ ಆಚರಣೆಯಾಗಿದೆ, ನಿಮ್ಮ ಅತಿ ಹೆಚ್ಚು ಪ್ರೀತಿಸುತ್ತೇನೆ ಎಂದು ಪ್ರಿಯಾಂಕ ಚೋಪ್ರಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಇವೆಲ್ಲಕ್ಕಿಂತಲೂ ನೆಟ್ಟಿಗರ ಗಮನ ಸೆಳೆದಿದ್ದು ಮಾತ್ರ ಪ್ರಿಯಾಂಕ ಚೋಪ್ರಾ ಮಗಳು ಮಾಲ್ತಿ ಮೇರಿ. ಸಾಮಾಜಿಕ ಜಾತಣಾಗಳಲ್ಲಿ ಪ್ರಿಯಾಂಕ ಚೋಪ್ರಾ ಮಗಳ ಫೋಟೋಗೆ ಅತಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗತೊಡಗಿದ್ದು, ಮಗು ಮುದ್ದಾಗಿದೆ ಎಂದು ಅಭಿಮಾನಿಗಳು ಕಾಮೆಂಟಿಸುತ್ತಿದ್ದಾರೆ.
2018 ರಲ್ಲಿ ವಿವಾಹವಾಗಿದ್ದ ಪ್ರಿಯಾಂಕ ಹಾಗೂ ನಿಕ್ ವಿವಾಹವಾಗಿದ್ದರು 2022 ರ ಜನವರಿಯಲ್ಲಿ ಸರೋಗೆಸಿ ಮೂಲಕ ಮಗು ಪಡೆದಿರುವುದನ್ನು ದಂಪತಿ ಘೋಷಿಸಿದ್ದರು.