
ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿ ಆಲಿಯಾ ಭಟ್
ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೊಸ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಬಾಚಿದೆ.
ಬರಹಗಾರ ಎಸ್ ಹುಸೇನ್ ಜೈದಿ ಅವರ ಪುಸ್ತಕ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಆಧರಿಸಿದ ಚಿತ್ರದಲ್ಲಿ 1960ರಲ್ಲಿ ಮುಂಬೈನ ರೆಡ್- ಲೈಟ್ ಏರಿಯಾ ಕಾಮಾಠಿಪುರದಲ್ಲಿ ಮೆರೆಯುವ ಪ್ರಮುಖ ಮಹಿಳೆಯ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ.
ಆಗಸ್ಟ್ 25 ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬನ್ಸಾಲಿ ಪ್ರೊಡಕ್ಷನ್ ಬಾಕ್ಸ್ ಆಫೀಸ್ ಗಳಿಕೆಯನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಗಂಗೂಬಾಯಿ ಕಥಿಯಾವಾಡಿ ನಮ್ಮ ಹೃದಯ ಮತ್ತು ಬಾಕ್ಸ್ ಆಫೀಸ್ ಗೆದ್ದಿರುವುದಾಗಿ ಟ್ವೀಟ್ ಮಾಡಲಾಗಿದೆ.
She reigns over our hearts & the box office!
— BhansaliProductions (@bhansali_produc) March 10, 2022
BOOK TICKETS NOW: https://t.co/NpIKjDCRN1#GangubaiKathiawadi, IN CINEMAS NOW#SanjayLeelaBhansali @aliaa08 @ajaydevgn @shantanum07 @prerna982 @jayantilalgada @PenMovies @saregamaglobal pic.twitter.com/TYb13xHUNv
ಆಲಿಯಾ ಭಟ್ ಕೂಡಾ ರೆಸ್ಟೋರೆಂಟ್ ವೊಂದರಲ್ಲಿ ಸಂಭ್ರಮಾಚರಣೆಯ ಫೋಟೋವೊಂದನ್ನು ಹಂಚಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ ಎಂದಿದ್ದಾರೆ. ಕಳೆದ ತಿಂಗಳು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನಗೊಂಡಿತ್ತು. ವಿಜಯ್ ರಾಜ್, ಸೀಮಾ ಪಾಸ್ವಾ ಮತ್ತು ಸೂಪರ್ ಸ್ಟಾರ್ ಅಜಯ್ ದೇವಗನ್ ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.