ಶಾರುಖ್ ಖಾನ್ 'ಪಠಾನ್' ಸಿನಿಮಾ ಫಸ್ಟ್ ಲುಕ್ ಬಿಡುಗಡೆ; ನೆಟ್ಟಿಗರು ಫಿದಾ!
ಜಿರೋ ಚಿತ್ರದ ಸೋಲಿನ ನಂತರ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪಠಾನ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ.
Published: 26th March 2022 06:16 PM | Last Updated: 26th March 2022 07:09 PM | A+A A-

ಮುಂಬೈ: ಜಿರೋ ಚಿತ್ರದ ಸೋಲಿನ ನಂತರ ಸಿನಿಮಾದಿಂದ ದೂರ ಉಳಿದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪಠಾನ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಮತ್ತೆ ಬರುತ್ತಿದ್ದಾರೆ.
ಇದಾಗಲೇ ಈ ಸಿನಿಮಾದ ಶೂಟಿಂಗ್ ಸ್ಪೇನ್ ನಲೆಲಿ ನಡೆಯುತ್ತಿದ್ದು, ಈ ಸಿನಿಮಾಕ್ಕೆ ಸಂಬಂಧಿಸಿದ ಹಲವು ಫೋಟೋಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೀಗ ಪಠಾನ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಶರ್ಟ್ ಧರಿಸದ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಮಿಂಚುತ್ತಿರುವ ಶಾರುಖ್ ಖಾನ್ ಅವರ ಫಸ್ಟ್ ಲುಕ್ ಗೆ ಅಭಿಮಾನಿಗಳು ಫದಾ ಆಗಿದ್ದಾರೆ. ಶಾರುಖ್ ಸ್ವಲ್ಪ ಸೋತರೂ ಪಠಾನ್ ಅನ್ನು ಹೇಗೆ ತಡೆಯುತ್ತೀರಿ ಎಂಬ ಅಡಿಬರಹದಡಿ ತಮ್ಮ ಅಧಿಕೃತ ಖಾತೆಯಲ್ಲಿ ಫಸ್ಟ್ ಲುಕ್ ಅಪ್ ಲೋಡ್ ಮಾಡಿದ್ದು, ೪ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಪಠಾನ್ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು, ಜಾನ್ ಅಬ್ಹಾಂ, ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.