ನಟ ಅಕ್ಷಯ್ ಕುಮಾರ್ ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡಿದ್ದನ್ನು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು, ವಿಡಿಯೋ ವೈರಲ್!
ವಿಶ್ವ ನಗು ದಿನದಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಾಚಣಿಗೆಯಿಂದ ತಮ್ಮ ಹಲ್ಲನ್ನು ಕೆರೆದುಕೊಂಡಿದ್ದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ನಟನ ವಿರುದ್ಧ ಛಾಟಿ ಬೀಸಿದ್ದಾರೆ.
Published: 02nd May 2022 04:17 PM | Last Updated: 02nd May 2022 04:17 PM | A+A A-

ಅಕ್ಷಯ್ ಕುಮಾರ್
ವಿಶ್ವ ನಗು ದಿನದಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಾಚಣಿಗೆಯಿಂದ ತಮ್ಮ ಹಲ್ಲನ್ನು ಕೆರೆದುಕೊಂಡಿದ್ದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ನಟನ ವಿರುದ್ಧ ಛಾಟಿ ಬೀಸಿದ್ದಾರೆ.
ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಪರಿಣಾಮವಾಗಿ ಅಕ್ಷಯ್ ವಿಮಲ್ ಪಾನ್ ಮಸಾಲ ಕಂಪನಿ ಜೊತೆಗಿನ ಒಪ್ಪಂದವನ್ನು ಕಡಿದುಕೊಂಡರು.
ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಭಾರೀ ವಿರೋಧ: ಕ್ಷಮೆ ಕೇಳಿ ಹಿಂದೆ ಸರಿದ ನಟ ಅಕ್ಷಯ್ ಕುಮಾರ್
ಇದೀಗ ಮತ್ತೊಮ್ಮೆ ಅಕ್ಷಯ್ ಕುಮಾರ್ ಟ್ರೋಲ್ ಆಗುತ್ತಿದ್ದಾರೆ. ಬಾಚಣಿಗೆಯಿಂದ ಹಲ್ಲನ್ನು ಕೆರೆದುಕೊಂಡು ವಿಡಿಯೋವನ್ನು ನೋಡಿದ ನೆಟ್ಟಿಗರು ಇದೆಲ್ಲಾ ವಿಮಲ್ ಪಾನ್ ಮಸಾಲ ಎಫೆಕ್ಟ್ ಎಂದು ಕಾಲೆಳೆಯುತ್ತಿದ್ದಾರೆ.
ವಿಮಲ್ ತಿಂದ ಬಳಿ ಹಲ್ಲಗಳನ್ನು ಈ ರೀತಿ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ನೆಟ್ಟಿಗರು ಅಕ್ಷಯ್ ಕುಮಾರ್ ಕಾಲೆಳೆಯುತ್ತಿದ್ದಾರೆ.
Key to happiness : to be able to laugh at yourself.
— Akshay Kumar (@akshaykumar) May 1, 2022
And on that note, here’s an act which is a result of sheer boredom, hope it makes you laugh. Please do laugh, it was actually painful
And Happy #WorldLaughterDay pic.twitter.com/zIp6y1GhVs