ಕಾಫಿ ವಿತ್ ಕರಣ್ ಹೊಸ ಸೀಸನ್ ಬರುವುದಿಲ್ಲ: ಭಾವನಾತ್ಮಕವಾಗಿ ವಿಷಯ ತಿಳಿಸಿದ ಕರಣ್ ಜೋಹರ್
ಹಿಂದಿಯ ಖ್ಯಾತ ಶೋ ಕಾಫಿ ವಿತ್ ಕರಣ್ ಮತ್ತೆ ಬರುವುದಿಲ್ಲ ಎಂಬ ವಿಚಾರವನ್ನು ಭಾವನಾತ್ಮಕವಾಗಿ ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಕರಣ್ ಜೋಹರ್ ಅವರು ಬುಧವಾರ ಹಂಚಿಕೊಂಡಿದ್ದಾರೆ.
Published: 04th May 2022 01:58 PM | Last Updated: 04th May 2022 02:22 PM | A+A A-

ಕರಣ್ ಜೋಹರ್
ಮುಂಬೈ: ಹಿಂದಿಯ ಖ್ಯಾತ ಶೋ ಕಾಫಿ ವಿತ್ ಕರಣ್ ಮತ್ತೆ ಬರುವುದಿಲ್ಲ ಎಂಬ ವಿಚಾರವನ್ನು ಭಾವನಾತ್ಮಕವಾಗಿ ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಕರಣ್ ಜೋಹರ್ ಅವರು ಬುಧವಾರ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಖುದ್ದಾಗಿ ಕರಣ್ ಅವರೇ, ಇನ್ ಸ್ಟಾಗ್ರಾಮ್ ನಲ್ಲಿ ವಿಚಾರ ಹಂಚಿಕೊಂಡಿದ್ದು ಭಾರವಾದ ಹೃದಯದಿಂದ ಕಾಫಿ ಜೊತೆ ಕರಣ್ ಬರುವುದಿಲ್ಲ ಎಂದು ಹೇಳಿದ್ದಾರೆ.
ಹಲೋ, ಕಾಫಿ ವಿತ್ ಕರಣ್ ಈಗ 6 ಸೀಸನ್‌ಗಳಿಂದ ನನ್ನ ಮತ್ತು ನಿಮ್ಮ ಜೀವನದ ಭಾಗವಾಗಿದೆ. ನಾವು ಈ ಶೋ ಮೂಲಕ ಎಲ್ಲರ ಮೇಲೂ ಬಹಳ ಪ್ರಭಾವ ಬೀರಿದ್ದೇವೆ ಮತ್ತು ಪಾಪ್ ಸಂಸ್ಕೃತಿಯ ಇತಿಹಾಸದಲ್ಲಿ ನಮ್ಮ ಸ್ಥಾನವನ್ನು ಕಂಡುಕೊಂಡಿದ್ದೇವೆ. ಕರಣ್ ಜೊತೆ ಕಾಫಿ ಬರುವುದಿಲ್ಲ ಎಂದು ಹೇಳಲು ಹೃದಯ ಭಾರವಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರಣ್ ಪ್ರಸ್ತುತ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಮತ್ತು ಮೇ ತಿಂಗಳಲ್ಲಿ ಚಿತ್ರೀಕರಣವು ಪೂರ್ಣಗೊಳ್ಳಲಿದೆ. ಶೆಡ್ಯೂಲ್ ಮುಗಿದರೆ, ಕರಣ್ ಕಾಫಿ ವಿತ್ ಕರಣ್ ಚಾಟ್ ಶೋ ಪ್ರಾರಂಭಿಸುತ್ತಾರೆಂದು ಹೇಳಲಾಗುತ್ತಿತ್ತು. ಈಗಾಗಲೇ ಯೋಜನೆ ಮತ್ತು ಪ್ರಿ-ಪ್ರೊಡಕ್ಷನ್ ಪ್ರಾರಂಭವಾಗಿದೆ ಮತ್ತು ತಂಡವು ಈಗ ಮೇ ಮಧ್ಯದಿಂದ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎನ್ನಲಾಗಿತ್ತು.
ಆದರೆ, ಇದೀಗ ಕಾರ್ಯಕ್ರಮ ಮರಳಿ ಪ್ರಾರಂಭವಾಗುವುದಿಲ್ಲ ಎಂಬ ಕರಣ್ ಅವರು ಹೇಳಿರುವುದು, ವೀಕ್ಷಕರು ನಿರಾಶೆಗೊಂಡಿದ್ದಾರೆ.
ಕಾಫಿ ವಿತ್ ಕರಣ್ ಮೊದಲ ಬಾರಿಗೆ 19 ನವೆಂಬರ್ 2004 ರಂದು ಪ್ರಸಾರವಾಯಿತು ಮತ್ತು ಇದು ಎರಡನೇ ಅತಿ ಹೆಚ್ಚು ಅವಧಿಯ ಟಾಕ್ ಶೋ ಆಗಿತ್ತು. ಪ್ರದರ್ಶನವು ತನ್ನ ಆರನೇ ಮತ್ತು ಅಂತಿಮ ಋತುವನ್ನು 17 ಮಾರ್ಚ್ 2019 ರಂದು ಮುಕ್ತಾಯಗೊಳಿಸಿತು.