ನನ್ನನ್ನು ಮದುವೆಯಾಗು ಎಂದು ನಟಿ ಜಾಹ್ನವಿ ಕಪೂರ್ ಟ್ವೀಟ್ ಮಾಡಿದ್ದೇಕೆ?
ಭಾರತೀಯ ಚಿತ್ರರಂಗದ ಸುಪ್ರಸಿದ್ಧ ತಾರೆ ಶ್ರೀದೇವಿ, ಬಾಲಿವುಡ್ ಚಿತ್ರರಂಗದ ಅದ್ದೂರಿ ಸಿನೆಮಾಗಳ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಇಂದು ತಮ್ಮ ಟ್ವೀಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Published: 10th May 2022 11:42 PM | Last Updated: 10th May 2022 11:42 PM | A+A A-

ಜಾಹ್ನವಿ
ಮುಂಬೈ: ಭಾರತೀಯ ಚಿತ್ರರಂಗದ ಸುಪ್ರಸಿದ್ಧ ತಾರೆ ಶ್ರೀದೇವಿ, ಬಾಲಿವುಡ್ ಚಿತ್ರರಂಗದ ಅದ್ದೂರಿ ಸಿನೆಮಾಗಳ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಅವರು ಇಂದು ತಮ್ಮ ಟ್ವೀಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅವರಿಂದು 'ನನ್ನನ್ನು ಮದುವೆಯಾಗು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಪಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿ ಪ್ರತಿಕ್ರಿಯಿದ್ದಾರೆ. ಕೆಲವರು ತಮಾಷೆಯಾಗಿ, ಕೆಲವರು ಗಂಭೀರವಾಗಿ ಉತ್ತರ ನೀಡಿದ್ದಾರೆ.
Sunk kisses pic.twitter.com/jFZLPrSo4X
— Janhvi Kapoor (@JanhviKappoor) April 29, 2022
ತಮ್ಮ ಚೆಂದದ ಫೋಟೋ ಜೊತೆಗೆ ಪೋಸ್ಟ್ ಮಾಡಿರುವ ಜಾಹ್ನವಿ ಟ್ವೀಟ್ ಹಿಂದೆ ತಮಾಷೆ ಉದ್ದೇಶವಿದೆ ಅಥವಾ ತಮ್ಮ ಮೆಚ್ಚಿನ ಯಾರಿಗೋ ಇವರು ಈ ಸಂದೇಶ ನೀಡಿರಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಏನೇ ಇರಲಿ, ಇವರ ಈ ಟ್ವೀಟ್ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಬಹುಶಃ ನಾಳೆ ಅವರು ಯಾವ ಕಾರಣಕ್ಕಾಗಿ ಈ ಟ್ವೀಟ್ ಮಾಡಿದೆ ಎಂದು ಉತ್ತರ ನೀಡಬಹುದು. ಅಲ್ಲಿಯ ತನಕ ಎಲ್ಲರ ಕುತೂಹಲದ ಕಣ್ಣು ಅವರ ಉತ್ತರದತ್ತಲೇ ಇರುತ್ತದೆ.
Marry me pic.twitter.com/xhEbe0wWC7
— Janhvi Kapoor (@JanhviKappoor) May 10, 2022