
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
ನವದೆಹಲಿ: ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಆದ ನವವಿವಾಹಿತ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ಅವರು ಶನಿವಾರದಂದು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ತಮ್ಮ ಒಂದು ತಿಂಗಳ ವಿವಾಹ ಸಂಭ್ರಮಕ್ಕೆ ಫೋಟೋ ಹಂಚಿಕೊಂಡಿದ್ದಾರೆ. ಒಂದು ಚಿತ್ರವು ಆಲಿಯಾ ಮತ್ತು ರಣಬೀರ್ ಅವರ ಮೆಹೆಂದಿ ಸಂಭ್ರಮದ್ದಾಗಿದ್ದರೆ, ಮತ್ತೊಂದು ಮದುವೆಯ ಸಮಾರಂಭದ ಫೋಟೋ ಆಗಿದೆ.
ಇದನ್ನು ಓದಿ: ಆಲಿಯಾ ಭಟ್ ಮದುವೆಯಲ್ಲಿ ತೊಟ್ಟಿದ್ದ ಲೆಹೆಂಗಾ ಚಿನ್ನ, ಬೆಳ್ಳಿಯಿಂದ ಮಾಡಿದ್ದಂತೆ!
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕಳೆದ ಏಪ್ರಿಲ್ 14 ರಂದು ತಮ್ಮ ಮುಂಬೈ ನಿವಾಸ ವಾಸ್ತುದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಮೇ 14ಕ್ಕೆ ಮದುವೆಯಾಗಿ ಒಂದು ತಿಂಗಳಾಗಿದೆ.
ಕಳೆದ 5 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದರು.