ಸಲ್ಮಾನ್ ಖಾನ್ ಅಭಿನಯದ ' ಕಬಿ ಈದ್, ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ 'ಕಬಿ ಈದ್ , ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
Published: 14th May 2022 06:36 PM | Last Updated: 14th May 2022 06:37 PM | A+A A-

ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ 'ಕಬಿ ಈದ್ , ಕಬಿ ದಿವಾಲಿ' ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಉದ್ದನೆಯ ಕೂದಲು, ಸನ್ ಗ್ಲಾಸಸ್, ಕೈಯಲ್ಲಿ ಕಬ್ಬಿಣದ ಕಂಬಿ ಹಿಡಿದು ನಿಂತಿರುವ ಲುಕ್ ಕಂಡುಬಂದಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಿದೆ. ಫಸ್ಟ್ ಲುಕ್ ನ್ನು ಸಲ್ಮಾನ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿದ್ದು, ಹೊಸ ಸಿನಿಮಾದ ಶೂಟಿಂಗ್ ಶುರುವಾಗಿದೆ ಎಂದು ಹೇಳಿದ್ದಾರೆ. ಈ ಫೋಸ್ಟ್ ನ್ನು ಏಳೂವರೆ ಲಕ್ಷಕ್ಕೂ ಅಧಿಮಂದಿ ಲೈಕ್ ಮಾಡಿದ್ದಾರೆ.
ಈ ಸಿನಿಮಾಕ್ಕೆ ಸಾಜಿದ್ ನಾಡಿಯಾಡ್ವಿಲಾ ಬಂಡವಾಳ ಹಾಕಿದ್ದು, ಫರ್ಹಾದ್ ಸಾಮ್ಜಿ ನಿರ್ದೇಶಿಸುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ. ಆಯುಷ್ ಶರ್ಮಾ, ಜಹೀರ್ ಇಕ್ಬಲ್ ಸೇರಿದಂತೆ ಬಹು ತಾರಾಗಣವೇ ಇದೆ. ಡಿಸೆಂಬರ್ 30, 2022ರಲ್ಲಿ ಚಿತ್ರ ಬಿಡುಗಡೆಯಾಗಲಿದೆ.