‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ಪುತ್ರಿ ಸುಹಾನಾಗೆ ಸಲಹೆ ಕೊಟ್ಟ ಶಾರುಖ್ ಖಾನ್
ಬಾಲಿವುಡ್ ಬಾದ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದು, ‘ಕಿಂಗ್ ಆಫ್ ಬಾಲಿವುಡ್‘ ತಮ್ಮ ಪುತ್ರಿಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ.
Published: 14th May 2022 06:14 PM | Last Updated: 14th May 2022 06:14 PM | A+A A-

ಶಾರುಖ್ ಜೊತೆ ಸುಹಾನಾ
ನವದೆಹಲಿ: ಬಾಲಿವುಡ್ ಬಾದ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದು, ‘ಕಿಂಗ್ ಆಫ್ ಬಾಲಿವುಡ್‘ ತಮ್ಮ ಪುತ್ರಿಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ.
ಶಾರುಖ್ ಪುತ್ರಿ ಸುಹಾನಾ ‘ದಿ ಆರ್ಚೀಸ್’ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಪುತ್ರಿಗೆ ಕಿಂಗ್ ಖಾನ್ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಸಲಹೆಗಳನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಶಾರುಖ್ ಖಾನ್ 'ಪಠಾನ್' ಸಿನಿಮಾ ಫಸ್ಟ್ ಲುಕ್ ಬಿಡುಗಡೆ; ನೆಟ್ಟಿಗರು ಫಿದಾ!
“ಸುಹಾನಾ ಖಾನ್ ನೆನಪಿಡಿ, ನೀವು ಎಂದಿಗೂ ಪರಿಪೂರ್ಣರಾಗುವುದಿಲ್ಲ. ಆದರೆ ನೀವು ನೀವಾಗಿರುವುದು ಪರಿಪೂರ್ಣತೆಗೆ ಹತ್ತಿರವಾಗಿದೆ. ದಯೆಯಿಂದಿರಿ ಮತ್ತು ನಟಿಯಾಗಿ ನಿಮ್ಮದೆ ಕೊಡುಗೆ ನೀಡಿ… ಅವಹೇಳನ ಮತ್ತು ಚಪ್ಪಾಳೆಗಳು ನಿಮ್ಮದಲ್ಲ. ಪರದೆಯ ಮೇಲೆ ಉಳಿದಿರುವ ನಿಮ್ಮ ಭಾಗವು ಯಾವಾಗಲೂ ನಿಮಗೆ ಸೇರಿರುತ್ತದೆ… ನೀನು ಬಹಳ ದೂರ ಸಾಗಿದ್ದೀಯ ಮಗು…. ಆದರೆ ಜನರ ಹೃದಯದ ಹಾದಿಯು ಅಂತ್ಯವಿಲ್ಲ … ಮುಂದೆ ಸಾಗಿ ಮತ್ತು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನಗಿಸಿ..ಈಗ ಲೈಟ್ ಇರಲಿ….ಕ್ಯಾಮೆರಾ ಮತ್ತು ಆಕ್ಷನ್ ” ಎಂದು ಪುತ್ರಿಗೆ ಸಲಹೆಗಳನ್ನು ನೀಡಿದ್ದಾರೆ.
ಜೋಯಾ ಅಖ್ತರ್ ಅವರ ‘ ದಿ ಆರ್ಚೀಸ್’ ಚಿತ್ರದಲ್ಲಿ ಸುಹಾನಾ ಖಾನ್ ಮೊದಲ ಬಾರಿಗೆ ನಟಿಯಾಗಿ ನಟಿಸಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ.