ಕರಣ್ ಜೋಹರ್ ಬರ್ತ್ ಡೇಗೆ ಆಲಿಯಾ ಭಟ್ ವಿಶ್ ಮಾಡಿದ್ದು ಹೇಗೆ ಗೊತ್ತಾ?
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಬುಧವಾರ ತಮ್ಮ 50ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇಂತಹ ಸಂಭ್ರಮದ ದಿನ ನಟಿ ಆಲಿಯಾ ಭಟ್ ಅವರು ಕರಣ್ ಜೋಹರ್ ಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ.
Published: 25th May 2022 07:15 PM | Last Updated: 25th May 2022 07:15 PM | A+A A-

ಆಲಿಯಾ ಭಟ್ - ಕರಣ್ ಜೋಹರ್
ಮುಂಬೈ: ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಬುಧವಾರ ತಮ್ಮ 50ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇಂತಹ ಸಂಭ್ರಮದ ದಿನ ನಟಿ ಆಲಿಯಾ ಭಟ್ ಅವರು ಕರಣ್ ಜೋಹರ್ ಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕರಣ್ ಜೋಹರ್ ಅವರು ತಮ್ಮ ಮದುವೆಯಲ್ಲಿ ಭಾಗಿಯಾದ ಮತ್ತು ಸಿನಿಮಾ ಸೆಟ್ ನಲ್ಲಿ ಅವರೊಂದಿಗೆ ಕಾಣಿಸಿಕೊಂಡ ಫೋಟೋಗಳನ್ನು ಹಂಚಿಕೊಂಡು ಆಲಿಯಾ ಶುಭ ಕೋರಿದ್ದಾರೆ.
ಇದನ್ನು ಓದಿ: ಮದುವೆಗೆ ಒಂದು ತಿಂಗಳು: ಮುದ್ದಾದ ಫೋಟೋ ಹಂಚಿಕೊಂಡ ಆಲಿಯಾ ಭಟ್
ಆಲಿಯಾ ಮದುವೆಯ ಮೆಹೆಂದಿ ಶಾಸ್ತ್ರದ ವೇಳೆ ಕರಣ್ ಜೋಹರ್ ಅವರು ಆಕೆಯ ಕೆನ್ನೆಗೆ ಚುಂಬಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಎರಡನೆಯದಾಗಿ ಮದುವೆ ನಂತರದ ಪಾರ್ಟಿಯ ಕ್ಯಾಂಡಿಡ್ ಚಿತ್ರ. ಕೊನೆಯ ಫೋಟೋ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಸೆಟ್ನಲ್ಲಿ ತೆಗೆದಿರುವುದು. ಈ ಫೋಟೋಗಳನ್ನು ಹಂಚಿಕೊಂಡಿರುವ ಆಲಿಯಾ, “ನನಗೆ ತಿಳಿದಿರುವ ಅತ್ಯಂತ ಉದಾರ ಆತ್ಮಕ್ಕೆ!.. ನನ್ನ ತಂದೆ .. ನನ್ನ ಆತ್ಮೀಯ ಸ್ನೇಹಿತ.. ಮತ್ತು ನನ್ನ ಮಾರ್ಗದರ್ಶಕ! 50ನೇ ಜನ್ಮದಿನದ ಶುಭಾಶಯಗಳು ಕೆ!” ಎಂದು ಶುಭ ಕೋರಿದ್ದಾರೆ.
ಆಲಿಯಾ ಭಟ್ ಅವರ ವೃತ್ತಿ ಜೀವನದಲ್ಲಿ ಕರಣ್ ಜೋಹರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆಲಿಯಾ ಅವರು ಕರಣ್ ಜೋಹರ್ ಅವರ ದಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ಅಲ್ಲದೆ ಅವರು ಆಲಿಯಾ ನಟಿಸಿರುವ 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಶಾಂದಾರ್, ಕಪೂರ್ ಮತ್ತು ಸನ್ಸ್, ಡಿಯರ್ ಜಿಂದಗಿ ಮತ್ತು ಇತರ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಏ ದಿಲ್ ಹೈ ಮುಷ್ಕಿಲ್ ನಂತರ ಅವರ ಮುಂಬರುವ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಆಲಿಯಾಗೆ ನಿರ್ದೇಶನ ಮಾಡಿದ್ದಾರೆ.
ತಡರಾತ್ರಿ ಕರಣ್ ಜೋಹರ್ ತಮ್ಮ ಸ್ನೇಹಿತರಿಗಾಗಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಫರಾ ಖಾನ್, ಅಯಾನ್ ಮುಖರ್ಜಿ, ಅಪೂರ್ವ ಮೆಹ್ತಾ, ಮಹೀಪ್ ಕಪೂರ್, ಸೋಹೈಲ್ ಖಾನ್ ಅವರ ಮಾಜಿ ಪತ್ನಿ ಸೀಮಾ ಕಿರಣ್ ಸಜ್ದೇಹ್ ಸೇರಿದಂತೆ ಅವರ ಆಪ್ತರು ಭಾಗವಹಿಸಿದ್ದರು.