ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಎನ್ ಸಿಬಿಯಿಂದ ಕ್ಲೀನ್ ಚಿಟ್!
ಹಡಗಿನಲ್ಲಿ ಪಾರ್ಟಿ ವೇಳೆ ಡ್ರಗ್ಸ್ ಸಿಕ್ಕಿ ಬಂಧನಕ್ಕೊಳಗಾದ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ಸಿಕ್ಕಿದೆ.
Published: 27th May 2022 02:00 PM | Last Updated: 27th May 2022 02:20 PM | A+A A-

ಬಾಲಿವುಡ್ ನಟ ಶಾರೂಕ್ ಖಾನ್ ಹಾಗೂ ಆರ್ಯನ್ ಖಾನ್
ಮುಂಬೈ: ಹಡಗಿನಲ್ಲಿ ಪಾರ್ಟಿ ವೇಳೆ ಡ್ರಗ್ಸ್ ಸಿಕ್ಕಿ ಬಂಧನಕ್ಕೊಳಗಾದ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ಸಿಕ್ಕಿದೆ.
ಡ್ರಗ್ಸ್ ಬಳಕೆ ತಡೆ ಏಜೆನ್ಸಿಯ ವಿಶೇಷ ತಂಡವು ಆರ್ಯನ್ ಖಾನ್ ಹಾಗೂ ಮೊಹಕ್ ಗೆ ಕ್ಲೀನ್ ಚಿಟ್ ನೀಡಲಾಗಿದೆ ಆರ್ಯನ್ ಮತ್ತು ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ವಸ್ತು ಹೊಂದಿದ್ದರು ಎಂದು ಎನ್ಸಿಬಿ ಡಿಡಿಜಿ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆರ್ಯನ್ ಖಾನ್, ಅವಿನ್ ಸಾಹು ಮತ್ತು ಇತರ 4 ಕಾರ್ಯಕ್ರಮ ಸಂಘಟಕರ ವಿರುದ್ಧ ಕಾರ್ಡೆಲಿಯಾ ಡ್ರಗ್ ಬಸ್ಟ್ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣ ರದ್ದುಪಡಿಸಲಾಗಿದೆ ಎಂದು ಎನ್ಸಿಬಿ ಹೇಳಿದೆ. ಆರ್ಯನ್ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು.
ಕಳೆದ ವರ್ಷ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ತನಿಖೆಯ ಮಧ್ಯೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಬಂಧಿಸಲಾಗಿತ್ತು. ಸುಮಾರು ನಾಲ್ಕು ವಾರಗಳ ನಂತರ ಅಕ್ಟೋಬರ್ 30 ರಂದು ಅವರು ಜೈಲಿನಿಂದ ಹೊರಬಂದಿದ್ದರು.
ಈ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರನ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಎನ್ಸಿಬಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಹಿಂದೆ ಹೇಳಿತ್ತು. ಆರ್ಯನ್ ಖಾನ್ ನನ್ನು "ದೊಡ್ಡ ಡ್ರಗ್ಸ್ ಪಿತೂರಿ ಅಥವಾ ಅಂತರಾಷ್ಟ್ರೀಯ ಡ್ರಗ್ಸ್ ಟ್ರಾಫಿಕಿಂಗ್ ಭಾಗವಾಗಿ ಸಿಲುಕಿಸಲಾಗಿದೆ ಎಂದು ಹೇಳಲಾಗಿತ್ತು.
ಆರಂಭದಲ್ಲಿ ಈ ಪ್ರಕರಣವನ್ನು ಎನ್ಸಿಬಿ ಮುಂಬೈ ತನಿಖೆ ನಡೆಸಿತು. ಆದರೆ ನಂತರ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ಆರೋಪದ ನಂತರ ಪ್ರಕರಣದ ಬಗ್ಗೆ ರಾಜಕೀಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಂತರ ಅದನ್ನು ನವೆಂಬರ್ 6, 2021 ರಂದು ಡಿಡಿಜಿ (ಆಪ್ಸ್) ಸಂಜಯ್ ಕುಮಾರ್ ಸಿಂಗ್ ನೇತೃತ್ವದ ದೆಹಲಿ ಪ್ರಧಾನ ಕಛೇರಿಯಿಂದ ಎಸ್ಐಟಿ ವಹಿಸಿಕೊಂಡಿತು.
ಕಳೆದ ವರ್ಷ ಅಕ್ಟೋಬರ್ 2 ರಂದು ಮುಂಬೈನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ದಾಳಿಯ ನಂತರ ಆರ್ಯನ್ ಅವರನ್ನು ಬಂಧಿಸಲಾಯಿತು. ಬಾಂಬೆ ಹೈಕೋರ್ಟ್ ಅವರನ್ನು ಬಂಧಿಸಿದ 25 ದಿನಗಳ ನಂತರ ಜಾಮೀನು ನೀಡಿತ್ತು.