ಜಿಮ್ ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತ: ಸಲ್ಮಾನ್ ಖಾನ್ 'ಡ್ಯೂಪ್' ಸಾಗರ್ ಪಾಂಡೆ ನಿಧನ

ಬಾಲಿವುಡ್  ಖ್ಯಾತ ನಟ ಸಲ್ಮಾನ್ ಖಾನ್  ಅವರ ಸಾಕಷ್ಟು ಸಿನಿಮಾಗಳಲ್ಲಿ ಡ್ಯೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಾಗರ್ ಪಾಂಡೆ ನಿಧನರಾಗಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ.
ಸಾಗರ್ ಪಾಂಡೆ
ಸಾಗರ್ ಪಾಂಡೆ

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಸಾಕಷ್ಟು ಸಿನಿಮಾಗಳಲ್ಲಿ ಡ್ಯೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಾಗರ್ ಪಾಂಡೆ ನಿಧನರಾಗಿದ್ದಾರೆ. ಜಿಮ್ ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭಜರಂಗಿ ಭಾಯ್ ಜಾನ್, ದಬಾಂಗ್, ಟ್ಯೂಬ್ ಲೈಟ್ ಸೇರಿದಂತೆ ಹಲವು ಸಿನಿಮಾಗಳ ಸಾಹಸ ದೃಶ್ಯದಲ್ಲಿ ಸಲ್ಮಾನ್ ಖಾನ್ ಬದಲಾಗಿ ಸಾಗರ್ ಪಾಂಡೆ ಅವರೇ ಡ್ಯೂಪ್ ಆಗಿ ನಟಿಸಿದ್ದಾರೆ.

ಈ ಕುರಿತು ಸಲ್ಮಾನ್ ಖಾನ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದು, ನನ್ನೊಂದಿಗೆ ಇದ್ದದ್ದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಆತ್ಮಕ್ಕೆ ಶಾಂತಿ ಕೋರುವೆ’ ಎಂದು ಬರೆದುಕೊಂಡಿದ್ದಾರೆ. ಅತಿ ಸಣ್ಣ ವಯಸ್ಸಿನ ಸಾಗರ್ ಪಾಂಡೆ ನಿಧನಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

<strong>ಸಲ್ಮಾನ್ ಖಾನ್ ಜೊತೆ ಸಾಗರ್ ಪಾಂಡೆ</strong>
ಸಲ್ಮಾನ್ ಖಾನ್ ಜೊತೆ ಸಾಗರ್ ಪಾಂಡೆ

ಸಾಗರ್ ಪಾಂಡೆ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಶಾಂತ್ ವಾಲ್ಡೆ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿಯೇ ಅವರ ನಿಧನವನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com