ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಸುಲಿಗೆ ಪ್ರಕರಣ: ನಟಿ ನೋರಾ ಫತೇಹಿ ವಿಚಾರಣೆ ನಡೆಸಿದ ಪೊಲೀಸರು

200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ನೋರಾ ಫತೇಹಿ
ನೋರಾ ಫತೇಹಿ

ನವದೆಹಲಿ: 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಈ ಹಿಂದೆ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಸುಕೇಶ್ ಚಂದಶೇಖರ್ ಮತ್ತು ನೋರಾ ಫತೇಹಿ ಅವರನ್ನು ಒಟ್ಟಿಗೆ ವಿಚಾರಣೆ ನಡೆಸಿತ್ತು. ಈ ವಿಚಾರಣೆಯು ಇ.ಡಿ ಸಲ್ಲಿಸಿರುವ ಚಾರ್ಜ್ ಶೀಟ್‌ನ ಭಾಗವಾಗಿದೆ.

ತನಿಖಾ ಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ಫತೇಹಿ, ಡಿಸೆಂಬರ್ 12, 2020ಕ್ಕೂ ಮೊದಲು ಸುಕೇಶ್‌ನೊಂದಿಗೆ ಮಾತನಾಡಿದ್ದನ್ನು ಫತೇಹಿ ನಿರಾಕರಿಸಿದ್ದಾರೆ. ಆದರೆ, ಸುಕೇಶ್, ಘಟನೆಯ ನಂತರ ಎರಡು ವಾರಗಳ ಮೊದಲು ನಟಿಯೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ.

ತನಗೆ ಉಡುಗೊರೆಯಾಗಿ ನೀಡಿದ ಐಷಾರಾಮಿ ಬಿಎಂಡಬ್ಲ್ಯು ಕಾರಿನ ಬಗ್ಗೆ ಮಾತನಾಡಿರುವ ಫತೇಹಿ, ಆರಂಭದಲ್ಲಿ ಸುಕೇಶ್ ತನಗೆ ಕಾರನ್ನು ನೀಡಿದಾಗ 'ಸರಿ' ಎಂದು ಹೇಳಿದ್ದೆ. ಆದರೆ, ನಂತರ ಅದು ತನಗೆ ಅಗತ್ಯವಿಲ್ಲ ಎಂದು ಬಾಬಿಗೆ ತಿಳಿಸಿದ್ದೇನು. ಬಾಬಿ ಈ ವಿಷಯದಲ್ಲಿ ಸುಕೇಶ್ ಜೊತೆ ಮಾತನಾಡಿದ್ದನು. ನಂತರ ಅವಕಾಶ ಸಿಕ್ಕಾಗ ಈ ಕಾರು ತೆಗೆದುಕೊಂಡು ಹೋಗುವಂತೆ ನಾನು ಬಾಬಿಗೆ ಹೇಳಿದೆ' ಎಂದು ತಿಳಿಸಿದ್ದಾರೆ. ಬಾಬಿ ಖಾನ್ ಬಾಲಿವುಡ್ ನಟಿಯ ಕುಟುಂಬದ ಸ್ನೇಹಿತ. ಆದರೆ, ಕಾರನ್ನು ನೇರವಾಗಿ ಫತೇಹಿ ಅವರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಕುಟುಂಬದ ಸ್ನೇಹಿತನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿ ಇದನ್ನು ತಳ್ಳಿಹಾಕಿದ್ದಾರೆ.

ಆರೋಪಿ ಹಾಗೂ ಫತೇಹಿ ನಡುವೆ ಐಷಾರಾಮಿ ಬ್ಯಾಗ್‌ಗಳಂತಹ ದುಬಾರಿ ಉಡುಗೊರೆಗಳ ವಿನಿಮಯವಾಗಿದೆಯೇ ಎಂದು ತನಿಖಾ ಸಂಸ್ಥೆ ಕೇಳಿದ್ದು, ಈ ರೀತಿ ಎಂದಿಗೂ ಆಗಿಲ್ಲ. ಆದರೆ, ತಾನು ಮುಖ್ಯ ಅತಿಥಿಯಾಗಿ ಭಾಗವಗಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕವಾಗಿ ಒಂದು Gucci ಬ್ಯಾಗ್ ಮತ್ತು Iphone 12 ಅನ್ನು ಉಡುಗೊರೆಯಾಗಿ ನೀಡಲಾಯಿತು ಎಂದಿದ್ದಾರೆ.

ಆದಾಗ್ಯೂ, ತಾನು ಬಾಲಿವುಡ್ ನಟಿಗೆ ನಾಲ್ಕು ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಜೊತೆಗೆ ಸ್ವಲ್ಪ ಹಣವೂ ಸೇರಿದಂತೆ ಅವೆಲ್ಲವುಗಳನ್ನು ಆಕೆಯೇ ಆಯ್ಕೆ ಮಾಡಿಕೊಂಡಿದ್ದರು. ಮುಂಬೈನ ಮಾಲ್‌ವೊಂದರಲ್ಲಿ ಫತೇಹಿ ಅವರ ಸಿಬ್ಬಂದಿ ಬ್ಯಾಗ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾರೆ.

ಫಾರ್ಮಾಸ್ಯುಟಿಕಲ್ ದೈತ್ಯ ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಅದಿತಿ ಸಿಂಗ್ ಮತ್ತು ಶಿವೇಂದರ್ ಸಿಂಗ್ ಅವರಿಂದ ಸುಕೇಶ್ ಚಂದ್ರಶೇಖರ್ ಸುಮಾರು ₹ 215 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

₹200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ಅವರನ್ನು ಮೂರು ದಿನಗಳ ಇ.ಡಿ ರಿಮಾಂಡ್‌ಗೆ ಕಳುಹಿಸಿದೆ. ದೆಹಲಿ ಜೈಲಿನಿಂದ ಸುಲಿಗೆ ದಂಧೆ ನಡೆಸುತ್ತಿದ್ದಕ್ಕಾಗಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ಇದಕ್ಕೂ ಮುನ್ನ, ಲೀನಾ ಮರಿಯಾ ಪೌಲ್ ಅವರು ತನಗೆ ಕರೆ ಮಾಡಿ ಫೋನ್ ಅನ್ನು ಸ್ಪೀಕರ್‌ಗೆ ಹಾಕಿದ್ದರು. ಆಗ ಸುಕೇಶ್ ಫತೇಹಿ ಅವರಿಗೆ ಧನ್ಯವಾದ ಸಲ್ಲಿಸುವುದಲ್ಲದೆ ತಮ್ಮ ಅಭಿಮಾನಿ ಎಂದು ಹೇಳಿದರು. ನಂತರ ಅವರು ಪ್ರೀತಿ ಮತ್ತು ಔದಾರ್ಯದ ಸಂಕೇತವಾಗಿ ತನಗೆ ಹೊಚ್ಚಹೊಸ BMW ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದರು ಎಂದು ನೋರಾ ಫತೇಹಿ ಈ ಹಿಂದೆ ಹೇಳಿದ್ದರು.

ಫತೇಹಿ ಅವರ ಹೇಳಿಕೆಗಳನ್ನು 2021 ರಲ್ಲಿ ಎರಡು ಬಾರಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾಗಿದ್ದು, ಆಗ ಅವರು 2021ರಲ್ಲಿ ಚಾರಿಟಿ ಈವೆಂಟ್‌ಗೆ ಬುಕಿಂಗ್‌ನಲ್ಲಿ ಸುಕೇಶ್ ಅವರ ಪತ್ನಿ ಅವರಿಗೆ ಗುಸ್ಸಿ ಬ್ಯಾಗ್ ಮತ್ತು ಒಂದು ಐಫೋನ್‌ ಅನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com