ಹಿಂದಿ ಸಿನಿಮಾಗಳು ನನಗೆ ಆತ್ಮ ತೃಪ್ತಿಯನ್ನು ನೀಡುತ್ತವೆ: ತೆಲುಗು ನಟ ನಾಗಾರ್ಜುನ

ತಮ್ಮ ಆತ್ಮವನ್ನು ತೃಪ್ತಿಪಡಿಸುವ ಅನುಭವಕ್ಕಾಗಿ ಯಾವಾಗಲೂ ನಾನು ಹುಡುಕುತ್ತೇನೆ ಮತ್ತು ಬಾಲಿವುಡ್‌ನಿಂದ ದೂರವಿದ್ದ ಹಲವು ವರ್ಷಗಳ ನಂತರ ನಾನು 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾವನ್ನು ಕೈಗೆತ್ತಿಕೊಳ್ಳಲು ಇದುವೇ ಕಾರಣ ಎಂದು ತೆಲುಗು ಸಿನಿಮಾ ರಂಗದ ಹಿರಿಯ ನಟ ನಾಗಾರ್ಜುನ ಹೇಳಿದ್ದಾರೆ.
ನಟ ನಾಗಾರ್ಜುನ
ನಟ ನಾಗಾರ್ಜುನ

ಮುಂಬೈ: ತಮ್ಮ ಆತ್ಮವನ್ನು ತೃಪ್ತಿಪಡಿಸುವ ಅನುಭವಕ್ಕಾಗಿ ಯಾವಾಗಲೂ ನಾನು ಹುಡುಕುತ್ತೇನೆ ಮತ್ತು ಬಾಲಿವುಡ್‌ನಿಂದ ದೂರವಿದ್ದ ಹಲವು ವರ್ಷಗಳ ನಂತರ ನಾನು 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾವನ್ನು ಕೈಗೆತ್ತಿಕೊಳ್ಳಲು ಇದುವೇ ಕಾರಣ ಎಂದು ತೆಲುಗು ಸಿನಿಮಾ ರಂಗದ ಹಿರಿಯ ನಟ ನಾಗಾರ್ಜುನ ಹೇಳಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಾಗಾರ್ಜುನ ನಟಿಸಿದ್ದಾರೆ.

'ನನಗೆ ಅತ್ಯುತ್ತಮ ಪಾತ್ರಗಳು ಸಿಗುತ್ತಿದ್ದವು. (ಆದರೆ) ನಾನು ಒಂದು ರೀತಿಯ ಮನೆ ಹಕ್ಕಿ. ನಾನು ಹೈದರಾಬಾದ್‌ನಲ್ಲಿ ವಾಸಿಸಲು ಇಷ್ಟಪಡುತ್ತೇನೆ. ನಾನು ಯಾವಾಗಲೂ ಬಾಲಿವುಡ್‌ನಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದೇನೆ. ನಾನು ಏನು ಮಾಡಿದ್ದೇನೋ ಅದನ್ನು ಮೊದಲಿನಿಂದಲೂ ಸರಿಯಾಗಿ ಮಾಡಿದ್ದೇನೆ. ಜನರಿಗೆ ಮನರಂಜನೆ ನೀಡುವುದು ನನಗೆ ಮುಖ್ಯವಾಗಿತ್ತು. ನಾನು ಮಾಡಿದ ಎಲ್ಲಾ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದವು, ನಾನು ಎಂದಿಗೂ ಅವುಗಳಿಗಾಗಿ ಹೋಗಲಿಲ್ಲ' ಎಂದಿದ್ದಾರೆ.

'ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ, ಏಕೆಂದರೆ, ಅವರು ಕರೆದಾಗಲೆಲ್ಲಾ ಅನುಭವ ಮತ್ತು ಆತ್ಮ ತೃಪ್ತಿಗಾಗಿ ನಾನು ಬಯಸುತ್ತೇನೆ ಮತ್ತು ನನ್ನ ಶಕ್ತಿಯನ್ನು ಮೀರಿ ನೀಡುವ ಪಾತ್ರಗಳನ್ನು ಮಾಡುತ್ತಿದ್ದೇನೆ. ಇದು ಯಾವಾಗಲೂ ಹೀಗೆಯೇ ಇದೆ' ಎಂದು 'ಶಿವ', 'ಖುದಾ ಗವಾ', 'ಕ್ರಿಮಿನಲ್' ಮತ್ತು 'ಝಖ್ಮ್' ಮುಂತಾದ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿರುವ 63 ವರ್ಷದ ತೆಲುಗು ನಟ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕೊನೆಯದಾಗಿ ಅವರು ಜೆಪಿ ದತ್ತಾ ಅವರ ಎಲ್‌ಒಸಿ: ಕಾರ್ಗಿಲ್ (2003) ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸೆಪ್ಟೆಂಬರ್ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು  300 ಕೋಟಿ ರೂ.ಗೂ ಹೆಚ್ಚು ಸಂಗ್ರಹಿಸಿರುವ 'ಬ್ರಹ್ಮಾಸ್ತ್ರ'ದಲ್ಲಿ ನಾಗಾರ್ಜುನ ಅವರು 'ನಂದಿ ಅಸ್ತ್ರ'ದ ಶಕ್ತಿಯನ್ನು ಹೊಂದಿರುವ ಅನೀಶ್ ಶೆಟ್ಟಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

'ಭಾರತದ ವಿವಿಧ ಚಲನಚಿತ್ರೋದ್ಯಮಗಳಲ್ಲಿ ಪ್ರತಿಭೆಗಳ ವಿನಿಮಯ ಹೆಚ್ಚುತ್ತಿರುವ ವೇಳೆಯಲ್ಲಿ ಬಂದ 'ಅಪರೂಪದ ಅವಕಾಶ' ಎಂಬ ಕಾರಣಕ್ಕಾಗಿಯೇ ಈ ಚಿತ್ರದಲ್ಲಿ ನಟಿಸಲು ನಾನು ಒಪ್ಪಿಕೊಂಡೆ. ಬ್ರಹ್ಮಾಸ್ತ್ರದಂತಹ ಸಿನಿಮಾ ಸರಿಯಾದ ಅವಕಾಶ. ಈಗ ಎಲ್ಲ ಅಡೆತಡೆಗಳು ಇಲ್ಲವಾಗಿವೆ ಮತ್ತು ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಹೀಗಾಗಿ ಇದು ಭಾರತದ ಚಿತ್ರೋದ್ಯಮವಾಗಿದೆ. ಹೀಗಾಗಿ ಭಾರತದ ಜನರು ಕ್ರಿಕೆಟ್‌ ಅನ್ನು ಪ್ರೀತಿಸುವಂತೆ ಎಲ್ಲ ಸಿನಿಮಾಗಳನ್ನು ಪ್ರೀತಿಸಬೇಕು. ಈ ಚಿತ್ರವು ಉದ್ಯಮದ ಬೆಳವಣಿಗೆಗೆ ಸಹಾಯ ಮಾಡಿದೆ ಮತ್ತು ನಟರು ವಿವಿಧ ಭಾಷೆಗಳಲ್ಲಿ ವಿಭಿನ್ನ ಪಾತ್ರಗಳನ್ನು ಅವಕಾಶ ನೀಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ' ಎಂದು ಅವರು ಹೇಳಿದರು.

2018 ರಲ್ಲಿ ಮುಖರ್ಜಿ ಅವರು 'ಬ್ರಹ್ಮಾಸ್ತ್ರ'ದ ಆಫರ್ ನೀಡಿದ್ದರು. ಆದರೆ, ಅದಕ್ಕೆ ಹೌದು ಎಂದು ಹೇಳುವ ಮೊದಲು ಒಂದು ಷರತ್ತನ್ನು ಹೊಂದಿದ್ದೆ. ಅಯಾನ್ ಅವರು ತನ್ನ ಚಿತ್ರದಲ್ಲಿ ಪಾತ್ರವೊಂದನ್ನು ಮಾಡಬೇಕೆಂದು ನನಗೆ ಹೇಳಿದಾಗ ಖಂಡಿತವಾಗಿಯು ಮಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನಾನು ಯಾವ ಪಾತ್ರವನ್ನು ಮಾಡಲಿದ್ದೇನೋ ಅದು ಉದ್ದವಾಗಿರಬೇಕು ಎಂದೇನಿಲ್ಲ. ಬದಲಿಗೆ ನಾನು ಮಾಡುವ ಪಾತ್ರ ನನ್ನ ಹೃದಯಕ್ಕೆ ತಟ್ಟಬೇಕು ಎಂದು ಖಚಿತವಾಗಿ ಹೇಳಿದೆ. ಆಗ ಅಯಾನ್ ಅವರು ಹೈದರಾಬಾದ್‌ಗೆ ಬಂದು ಎಲ್ಲವನ್ನೂ ವಿವರಿಸಿದರು' ಎಂದು ತಿಳಿಸಿದ್ದಾರೆ.

‘ರಾಮಾಯಣ’, ‘ಮಹಾಭಾರತ’ ಹಾಗೂ ಸಾಕಷ್ಟು ಜನಪದ ಚಿತ್ರಗಳನ್ನು ನೋಡುತ್ತಾ ಬೆಳೆದೆ. ಮಹಾಭಾರತದಲ್ಲಿ ಅವರು ಯುದ್ಧದಲ್ಲಿ ಅಸ್ತ್ರಗಳನ್ನು ಬಳಸಿದ್ದನ್ನು ನಾನು ನೋಡಿದ್ದ ಮತ್ತು ಅದು ನನಗೆ ಆಸಕ್ತಿಯನ್ನುಂಟುಮಾಡಿತು. ಅಯಾನ್ ಅವರು ಚಿತ್ರವನ್ನು ವಿವರಿಸುತ್ತಿರುವಾಗ, ನಮ್ಮ ದೇಶದಲ್ಲಿಯೂ ಇಂತದ್ದೊಂದು ಚಿತ್ರವನ್ನು ಮಾಡುತ್ತಿದ್ದಾರೆ ಎಂದು ನನಗೆ ಸಂತೋಷವಾಯಿತು. ಅದು ನನ್ನನ್ನು ಚಿಕ್ಕ ವಯಸ್ಸಿನ ಎಲ್ಲಾ ನೆನಪುಗಳಿಗೆ ಹಿಂತಿರುಗಿಸಿತು ಮತ್ತು ನಾನು ಹೌದು ಎಂದು ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ' ಎಂದಿದ್ದಾರೆ.

ವಿಶುವಲ್ ಎಫೆಕ್ಟ್‌ಗಳಿಂದ ತುಂಬಿರುವ ಚಲನಚಿತ್ರದ ಚಿತ್ರೀಕರಣದಲ್ಲಿ, ತಮ್ಮ ಪಾತ್ರವು ತನ್ನ ಮಹಾಶಕ್ತಿಯನ್ನು ಪ್ರದರ್ಶಿಸಿದಾಗಲೆಲ್ಲ, ತನ್ನ ಕಲ್ಪನೆಯನ್ನು ತೆರೆದುಕೊಳ್ಳಬೇಕಾಗಿರುವುದರಿಂದ ಇದು ಒಂದು ಅನನ್ಯ ಅನುಭವವಾಗಿದೆ. ಇದೆಲ್ಲವನ್ನೂ ಅಯಾನ್ ವಿವರಿಸಿದರು. ಚಿತ್ರದಲ್ಲಿನ ತನ್ನ ಪಾತ್ರವನ್ನು ಜನರು ಇಷ್ಟಪಟ್ಟಿದ್ದಾರೆಂದು ಮತ್ತು ಪಾತ್ರವು ಪ್ರಭಾವಶಾಲಿಯಾಗಿದೆ ಎಂಬುದು ನನಗೆ ಸಂತೋಷವನ್ನುಂಟು ಮಾಡಿದೆ' ಎಂದು ಅವರು ಹೇಳಿದರು.

'ನನ್ನೊಂದಿಗೆ ಸಿನಿಮಾ ಮಾಡುವ ಬಗ್ಗೆ ನಾನು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರನ್ನು ಕೇಳುತ್ತಲೇ ಇರುತ್ತೇನೆ ಮತ್ತು ಅವರು ಯಾವಾಗಲೂ ನಗುತ್ತಿರುತ್ತಾರೆ. ಆದರೆ, ಸಮಯ ಬಂದಾಗ ಅದು ಸಂಭವಿಸುತ್ತದೆ. ರಾಜಮೌಳಿ ಅವರು ಕಥೆಯನ್ನು ಬರೆದ ನಂತರ ನಟರನ್ನು ಹುಡುಕುತ್ತಾರೆ. ಆದರೆ, ಅವರು ಮೊದಲು ಸ್ಕ್ರಿಪ್ಟ್ ಅನ್ನು ಬರೆಯಬೇಕು' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com