'ಆಕೆಗೆ ನನ್ನ ಪರ್ಮಿಷನ್ ಬೇಕಿಲ್ಲ'; ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು!
ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು ನೀಡಿದ್ದು, ಆಕೆಗೆ ನನ್ನ ಪರ್ಮಿಷನ್ ಬೇಕಿಲ್ಲ ಎಂದು ಹೇಳಿದ್ದಾರೆ.
Published: 30th April 2023 12:25 PM | Last Updated: 30th April 2023 12:25 PM | A+A A-

ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ
ಮುಂಬೈ: ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು ನೀಡಿದ್ದು, ಆಕೆಗೆ ನನ್ನ ಪರ್ಮಿಷನ್ ಬೇಕಿಲ್ಲ ಎಂದು ಹೇಳಿದ್ದಾರೆ.
ಪೊನ್ನಿಯನ್ ಸೆಲ್ವನ್ 2 ಚಿತ್ರದ ಕುರಿತು ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್ ಚಿತ್ರ ತಂಡಕ್ಕೆ ಶುಭ ಕೋರಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೋರ್ವ ಅಭಿಷೇಕ್ ಪ್ರಶ್ನೆಯೊಂದನ್ನು ಕೇಳಿದ್ದು, ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಿ, ನೀವು ಆರಾಧ್ಯಳನ್ನ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
As you should! Now let her sign more movies and you take care of Aaradhya
— Unpaid PS2 marketing manager (@SilamSiva) April 29, 2023
ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದಿಂದ ಅಕ್ಷಯ್ ಕುಮಾರ್, ಐಶ್ವರ್ಯ ರೈ ಬಳಕೆ: ರಾಹುಲ್ ಗಾಂಧಿ
ಇದಕ್ಕೆ ನಟ ಅಭಿಷೇಕ್ ಬಚ್ಚನ್ ಕೂಡ ರಿಯಾಕ್ಟ್ ಮಾಡಿದ್ದು, ಐಶ್ವರ್ಯಾಗೆ ಹೆಚ್ಚು ಸಿನಿಮಾಗಳನ್ನ ಮಾಡಲು ಬಿಡಬೇಕಾ ಸರ್? ಯಾವುದಕ್ಕೂ ಅವರು ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅದರಲ್ಲೂ ಅವರು ಇಷ್ಟ ಪಡುವ ವಿಚಾರದಲ್ಲಿ ನನ್ನ ಅನುಮತಿ ಬೇಕಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಈ ಮೂಲಕ ಅವರ ಇಷ್ಟ, ಅವರ ಆಯ್ಕೆ ಎಂದು ನಟ ತಿಳಿಸಿದ್ದಾರೆ.
Let her sign??? Sir, she certainly doesn’t need my permission to do anything. Especially something she loves.
— Abhishek