ಜವಾನ್ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದರ್ಶನ ಪಡೆದ ಶಾರುಖ್ ಖಾನ್

ಸೂಪರ್ ಸ್ಟಾರ್ ಶಾರುಖ್ ಖಾನ್  ತಮ್ಮ ಬಹು ನಿರೀಕ್ಷಿತ ಚಿತ್ರ "ಜವಾನ್" ಬಿಡುಗಡೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋ ದೇವಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವೈಷ್ಣೋದೇವಿ ದರ್ಶನ ಪಡೆದ ಶಾರುಖ್ ಖಾನ್
ವೈಷ್ಣೋದೇವಿ ದರ್ಶನ ಪಡೆದ ಶಾರುಖ್ ಖಾನ್

ಮುಂಬೈ: ಸೂಪರ್ ಸ್ಟಾರ್ ಶಾರುಖ್ ಖಾನ್  ತಮ್ಮ ಬಹು ನಿರೀಕ್ಷಿತ ಚಿತ್ರ "ಜವಾನ್" ಬಿಡುಗಡೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋ ದೇವಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

58 ವರ್ಷದ ನಟ ಶಾರುಖ್ ಖಾನ್ ಮಂಗಳವಾರ ತಡರಾತ್ರಿ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. "ಶಾರುಖ್ ಖಾನ್ ಮಂಗಳವಾರ ಸಂಜೆ ಬೇಸ್ ಕ್ಯಾಂಪ್ ಕತ್ರಾ ತಲುಪಿದರು ಮತ್ತು ರಾತ್ರಿ 11.40 ರ ಸುಮಾರಿಗೆ ದೇಗುಲವನ್ನು ತಲುಪಲು ಹೊಸ ತಾರಾಕೋಟೆ ಮಾರ್ಗವನ್ನು ಬಳಸಿದರು. ಅವರು ಪ್ರಾರ್ಥನೆ ಸಲ್ಲಿಸಿ ತಕ್ಷಣವೇ ತೆರಳಿದರು" ಎಂದು ಅಧಿಕಾರಿ ಹೇಳಿದರು.

ದೇಗುಲದಲ್ಲಿರುವ ನಟನನ್ನು ತೋರಿಸುವ ಸಂಕ್ಷಿಪ್ತ ವೀಡಿಯೊ ಬಿಡುಗಡೆಯಾಗಿದ್ದು, ಶಾರುಖ್ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಭಕ್ತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾರುಖ್ ಖಾನ್ ಅವರ ಮುಖವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈ ಕುರಿತ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೈಷ್ಣೋದೇವಿ ದೇಗುಲ ಮಂಡಳಿಯ ಅಧಿಕಾರಿಗಳು, ಕೆಲವು ಪೊಲೀಸರು ಮತ್ತು ಸೂಪರ್‌ಸ್ಟಾರ್ ಅವರ ವೈಯಕ್ತಿಕ ಸಿಬ್ಬಂದಿಯನ್ನು ಕ್ಲಿಪ್‌ನಲ್ಲಿ ಕಾಣಬಹುದು.

ಒಂಬತ್ತು ತಿಂಗಳಲ್ಲಿ ಶಾರುಖ್ ವೈಷ್ಣೋದೇವಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ನಟ ಈ ಹಿಂದೆ ಡಿಸೆಂಬರ್ 2022 ರಲ್ಲಿ ಅವರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರ "ಪಠಾನ್" ಬಿಡುಗಡೆಗೆ ಒಂದು ತಿಂಗಳ ಮೊದಲು ದೇವಾಲಯಕ್ಕೆ ಭೇಟಿ ನೀಡಿದ್ದರು.

ಇನ್ನು "ಜವಾನ್", ಹೈ-ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ಅಟ್ಲೀ ಜವಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಿಗೆ ಬರಲಿದೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸಾನ್ಯಾ ಮಲ್ಹೋತ್ರಾ ಸಹ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com