ನವವಿವಾಹಿತರಾದ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಕ್ಷಮೆಯಾಚಿಸಿದ ನಟ ರಾಮ್ ಚರಣ್ ಪತ್ನಿ ಉಪಾಸನಾ
ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.
Published: 08th February 2023 12:30 PM | Last Updated: 08th February 2023 01:24 PM | A+A A-

ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಮ್ ಚರಣ್- ಪತ್ನಿ ಉಪಾಸನಾ
ಮುಂಬೈ: ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.
ಪೂರ್ವ ನಿಗಧಿ ಕೆಲಸಗಳ ಕಾರಣದಿಂದ ತಮ್ಮ ಮದುವೆಗೆ ಹಾಜರಾಗದಿದ್ದಕ್ಕಾಗಿ ಉಪಾಸನಾ ಅವರು ದಂಪತಿಗೆ ಕ್ಷಮೆಯಾಚಿಸಿದ್ದಾರೆ.
ಕಮೆಂಟ್ ಮಾಡಿರುವ ಅವರು, 'ಅಭಿನಂದನೆಗಳು. ಇದು ತುಂಬಾ ಸುಂದರವಾಗಿದೆ. ಕ್ಷಮಿಸಿ ನಾವು ಅಲ್ಲಿರಲು ಸಾಧ್ಯವಾಗಲಿಲ್ಲ. ನಿಮ್ಮಿಬ್ಬರಿಗೂ ನಮ್ಮ ಕಡೆಯಿಂದ ಬಹಳಷ್ಟು ಪ್ರೀತಿ' ಎಂದಿದ್ದಾರೆ.
ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರುವರಿ 7 ರಂದು ಜೈಸಲ್ಮೇರ್‌ನ ಸೂರ್ಯಗ್ರಹ ಅರಮನೆಯಲ್ಲಿ ವಿವಾಹವಾದರು. ಮಂಗಳವಾರ ತಡರಾತ್ರಿ ನಡೆದ ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ
ಕಿಯಾರಾ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಸಿದ್ಧಾರ್ಥ್ ಅದಕ್ಕೆ ಹೊಂದುವ ಪೇಟದೊಂದಿಗೆ ಶೇರ್ವಾನಿಯನ್ನು ಧರಿಸಿದ್ದರು.
ಸಿದ್ಧಾರ್ಥ್ ಶೀಘ್ರದಲ್ಲೇ ರೋಹಿತ್ ಶೆಟ್ಟಿ ನಿರ್ದೇಶನದ ಮುಂಬರುವ 'ಇಂಡಿಯನ್ ಪೋಲೀಸ್ ಫೋರ್ಸ್'ನೊಂದಿಗೆ ವೆಬ್ ಸರಣಿಯನ್ನು ಪ್ರಾರಂಭಿಸಲಿದ್ದಾರೆ. ಅವರ ಮುಂಬರುವ ಯೋಜನೆಗಳಲ್ಲಿ ಯೋಧಾ ಕೂಡ ಒಂದು. ಕಿಯಾರಾ ಅವರು, ಕಾರ್ತಿಕ್ ಆರ್ಯನ್ ಜೊತೆಗೆ ಸತ್ಯಪ್ರೇಮ್ ಕಿ ಕಥಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.