'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.
ಪಠಾಣ್ ಸಿನಿಮಾ ಸ್ಟಿಲ್
ಪಠಾಣ್ ಸಿನಿಮಾ ಸ್ಟಿಲ್

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.

ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಪ್ರದರ್ಶನವನ್ನು ಆಚರಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಏಕೆಂದರೆ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಹಿಂದಿ ಚಲನಚಿತ್ರೋದ್ಯಮವನ್ನು ಏಕಾಂಗಿಯಾಗಿ ರಕ್ಷಿಸಿದೆ ಮತ್ತು ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ 963 ಕೋಟಿ ರೂ. ಗಳನ್ನು ಸಂಗ್ರಹಿಸುವ ಮೂಲಕ ದಾಖಲೆ ಬರೆದಿದೆ.

ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಪಠಾಣ್ ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂದು ಆಚರಿಸಲು, ಭಾರತದ ಅಗ್ರ ಥಿಯೇಟರ್ ಸರಪಳಿಗಳಾದ ಪಿವಿಆರ್, Inox, Cinepolis, Miraj, Movietime, MuktaA2 ಮತ್ತು ಇತರ ಚಿತ್ರಮಂದಿರಗಳು ಈ ಶುಕ್ರವಾರವನ್ನು 'ಪಠಾಣ್ ದಿನ' ಎಂದು ಆಚರಿಸಲು ಒಗ್ಗೂಡಿವೆ.

ಶಾರುಖ್ ಖಾನ್ ಅಭಿನಯದ 'ಪಠಾನ್' ಭಾರತದಲ್ಲಿ 498.85 ಕೋಟಿ (ಹಿಂದಿ - 481.35 ಕೋಟಿ ರೂ., ಡಬ್ಬಿಂಗ್- 17.50 ಕೋಟಿ ರೂ.) ರೂಪಾಯಿಗಳನ್ನು ಗಳಿಸಿದೆ.

ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು, ತನ್ನ ಕುಟುಂಬದ ಮೇಲೆ ದಾಳಿ ಮಾಡಿ ಕೊಲ್ಲಲ್ಪಟ್ಟ ನಂತರ ಉಗ್ರವಾಗಿ ಹಿಂತಿರುಗಿದ ಮಾಜಿ RAW ಏಜೆಂಟ್‌ನ ದುಷ್ಟ ಯೋಜನೆಗಳಿಂದ ದೇಶವನ್ನು ಉಳಿಸಲು ಹೋರಾಡುವ ಪತ್ತೇದಾರಿಯ ಕಥೆಯನ್ನು ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com