ಬಾಲಿವುಡ್ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು 1100 ಕಿ.ಮೀ ದೂರ ಪ್ರಯಾಣಿಸಿದ ಅಭಿಮಾನಿ!
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಮಧ್ಯಪ್ರದೇಶದ ಜಬಲ್‌ಪುರದ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಸೈಕಲ್ ಮೂಲಕ 1100 ಕಿಮೀ ಕ್ರಮಿಸಿ ಮುಂಬೈಗೆ ಆಗಮಿಸಿದ ಅಭಿಮಾನಿಯ ಪ್ರೀತಿಗೆ ನಟ ಫುಲ್ ಫಿದಾ ಆಗಿದ್ದರು.
Published: 03rd January 2023 01:02 PM | Last Updated: 03rd January 2023 01:42 PM | A+A A-

ತನ್ನ ಅಭಿಮಾನಿಯೊಂದಿಗೆ ನಟ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಮಧ್ಯಪ್ರದೇಶದ ಜಬಲ್‌ಪುರದ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಸೈಕಲ್ ಮೂಲಕ 1100 ಕಿಮೀ ಕ್ರಮಿಸಿ ಮುಂಬೈಗೆ ಆಗಮಿಸಿದ ಅಭಿಮಾನಿಯ ಪ್ರೀತಿಗೆ ನಟ ಫುಲ್ ಫಿದಾ ಆಗಿದ್ದರು.
'ದಬಾಂಗ್' ನಟನೊಂದಿಗಿರುವ ಅಭಿಮಾನಿಯ ಚಿತ್ರ ಸದ್ಯ ವೈರಲ್ ಆಗುತ್ತಿದೆ. ಅವರ ಸೈಕಲ್‌ನಲ್ಲಿರುವ ಬೋರ್ಡ್‌ನಲ್ಲಿ, 'ಚಲೋ ಉಂಕೋ ದುವಾಯೇ ದೇತೇ ಚಲೇ. ಜಬಲ್‌ಪುರದಿಂದ ಮುಂಬೈ, ದೀವಾನಾ ಮೈ ಚಲಾ' ಎಂದು ಬರೆಯಲಾಗಿದೆ.
ಸಲ್ಮಾನ್ ಖಾನ್ ಅಭಿಮಾನಿ ಪುಟವು ಈ ಚಿತ್ರವನ್ನು ಹಂಚಿಕೊಂಡಿದ್ದು, 'ಜಬಲ್‌ಪುರದ ನಿವಾಸಿ ಸಮೀರ್ ಎಂಬುವವರು ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಮುಂಬೈಗೆ 1100 ಕಿಮೀ ಸೈಕಲ್‌ನಲ್ಲಿ ಬಂದಿದ್ದಾರೆ' ಎಂದಿದೆ.
ನಟ ಡಿಸೆಂಬರ್ 27 ರಂದು ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹುಟ್ಟುಹಬ್ಬದಂದು ಸಲ್ಮಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ತಮ್ಮ ಅಭಿಮಾನಿಗಳತ್ತ ಕೈಬೀಸುವ ಚಿತ್ರವನ್ನು ಹಂಚಿಕೊಂಡಿದ್ದು, "ಎಲ್ಲರಿಗೂ ಧನ್ಯವಾದಗಳು..." ಎಂದು ಬರೆದಿದ್ದಾರೆ.
PHOTOS: ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬ
ತನ್ನ ಕುಟುಂಬ ಹಾಗೂ ಸ್ನೇಹಿತರಿಗಾಗಿ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರುಖ್ ಖಾನ್, ಇಯುಲಿಯಾ ವಂತೂರ್, ಟಬು, ಪೂಜಾ ಹೆಗ್ಡೆ, ಸಂಗೀತಾ ಬಿಜಲಾನಿ, ಸೋನಾಕ್ಷಿ ಸಿನ್ಹಾ, ಕಾರ್ತಿಕ್ ಆರ್ಯನ್ ಇತರರು ಭಾಗವಹಿಸಿದ್ದರು.
ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಜೊತೆ 'ಟೈಗರ್ 3' ಮತ್ತು ಪೂಜಾ ಹೆಗ್ಡೆ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.