ಬಿಡುಗಡೆಯಾದ ಮೊದಲ ದಿನವೇ ರೂ.100 ಕೋಟಿ ಬಾಚಿದ ಪಠಾಣ್: ಶಾರುಖ್ ಪ್ರಶಂಸಿಸಿದ ಕರಣ್ ಜೋಹರ್
'ಪಠಾಣ್' ಚಿತ್ರ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಬಾಚಿದ್ದು, ನಟ ಶಾರೂಖ್ ಖಾನ್ ಅವರನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಪ್ರಶಂಸಿಸಿದ್ದಾರೆ.
Published: 26th January 2023 10:03 PM | Last Updated: 26th January 2023 10:05 PM | A+A A-

ಪಠಾಣ್ ಫೋಸ್ಟರ್, ಕರಣ್ ಜೋಹರ್ ಸಾಂದರ್ಭಿಕ ಚಿತ್ರ
ಮುಂಬೈ: 'ಪಠಾಣ್' ಚಿತ್ರ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಬಾಚಿದ್ದು, ನಟ ಶಾರೂಖ್ ಖಾನ್ ಅವರನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಪ್ರಶಂಸಿಸಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಠಾಣ್ ಫೋಸ್ಟರ್ ಹಂಚಿಕೊಂಡಿರುವ ಕರಣ್, ಒಂದೇ ದಿನದಲ್ಲಿ 100 ಕೋಟಿಗೂ ಅಧಿಕ ಹಣ ಬಾಚಿದ ಹಿಟ್ ಸಿನಿಮಾವಾಗಿದೆ. ಮೆಗಾಸ್ಟಾರ್ ಶಾರೂಖ್ ಖಾನ್ ದಾರ್ಶನಿಕ ಮತ್ತು ಪೌರಾಣಿಕ ಪ್ರೀತಿಯು ದ್ವೇಷವನ್ನು ಶಾಶ್ವತವಾಗಿ ಜಯಿಸುತ್ತದೆ. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅವರ ಅಭಿನಯ ಅದ್ಬುತವಾಗಿದೆ ಎಂದು ಬರೆದುಕೊಂಡಿದ್ದಾರೆ.
ಭಾರತೀಯ ಚಿತ್ರೋದ್ಯಮದ ವಿಶ್ಲೇಷಕ ತರಣ್ ಆದರ್ಶ ಪ್ರಕಾರ 'ಪಠಾಣ್' ಬಿಡುಗಡೆಯಾದ ಮೊದಲ ದಿನವೇ ರೂ. 55 ಕೋಟಿ ಬಾಚಿದೆ. ಈ ಮೂಲಕ ಬಿಡುಗಡೆಯಾದ ಮೊದಲ ದಿನವೇ ಹಿಂದಿಯಲ್ಲಿ ರೂ. 53 ಕೋಚಿ ಕಲೆಕ್ಷನ್ ಮಾಡಿದ ಯಶ್ ಅಭಿನಯದ ಕೆಜಿಎಫ್ 2 ಮತ್ತು ಹೃತಿಕ್ ರೋಷನ್ ಅಭಿನಯದ ವಾರ್ (ರೂ. 51 ಕೋಟಿ) ದಾಖಲೆಯನ್ನು ಹಿಂದಿಕ್ಕಿದೆ.
‘PATHAAN’: ₹ 106 CR *GROSS* ON DAY 1 WORLDWIDE… #Pathaan demolishes #Worldwide opening day records for #Hindi films… #India + #Overseas *Gross* BOC on *Day 1* is ₹ 106 cr. PHENOMENAL. pic.twitter.com/M2tkjnWS4s
— taran adarsh (@taran_adarsh) January 26, 2023