
ಪಠಾಣ್ ಚಿತ್ರದ ಸ್ಟಿಲ್
ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪಠಾಣ್ ಸಿನಿಮಾ 2 ನೇ ದಿನದಂದು 200 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಪಠಾಣ್ ಸಿನಿಮಾ 219.6 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಸಿನಿಮಾ ತಂಡ ಘೋಷಿಸಿದೆ. ಪ್ರೊಡಾಕ್ಷನ್ ಹೌಸ್ ಯಶ್ ರಾಜ್ ಸಿನಿಮಾ ನೀಡಿರುವ ಮಾಹಿತಿಯ ಪ್ರಕಾರ ಎಸ್ ಆರ್ ಕೆ-ದೀಪಿಕಾ ಪಡುಕೋಣೆ ನಟನೆಯ ಸಿನಿಮಾ 2 ನೇ ದಿನದಂದು 113.6 ಕೋಟಿ ರೂಪಾಯಿಗಳನ್ನು ಜಾಗತಿಕವಾಗಿ ಗಳಿಸಿದೆ. ಮೊದಲ ದಿನ ಸಿನಿಮಾದ ಗಳಿಕೆ 106 ಕೋಟಿ ರೂಪಾಯಿಯಷ್ಟಿತ್ತು.
ಇದನ್ನೂ ಓದಿ: ಪಠಾಣ್ ಸಿನಿಮಾಗೆ ಇಂಡಿಯನ್ ಪಠಾಣ್ ಅಂತ ಮರುನಾಮಕರಣ ಮಾಡ್ತಾರಂತೆ ಕಂಗನಾ, ಯಾಕೆ ಅಂದರೆ...
ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ ಎರಡನೇ ದಿನದಂದು 70.5 ಕೋಟಿ ರೂಪಾಯಿಗಳನ್ನು ಗಳಿಸಿದೆ. (ಒಟ್ಟು 82.94 ಕೋಟಿ ರೂಪಾಯಿ) ಸಿನಿಮಾದ ಹಿಂದಿ ಆವೃತ್ತಿ 68 ಕೋಟಿ ರೂಪಾಯಿಯನ್ನು ಗಳಿಸಿದ್ದು, ಡಬ್ಬಿಂಗ್ ಆವೃತ್ತಿಯಲ್ಲಿ 2.5 ಕೋಟಿ ರೂಪಾಯಿ ಗಳಿಸಿದೆ.
ಪಠಾಣ್ ಸಿನಿಮಾ ತಮಿಳು ಹಾಗೂ ತೆಲುಗು ಗಳಲ್ಲಿ ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ ಒಟ್ಟು 70 ಕೋಟಿ ರೂಪಾಯಿಗಳಿಸಿದ ಹಿಂದಿ ಸಿನಿಮಾ ಎಂಬ ದಾಖಲೆಯನ್ನೂ ಪಠಾಣ್ ನಿರ್ಮಿಸಿದೆ.
ಅಂತಾರಾಷ್ಟ್ರಿಯವಾಗಿ ಸಿನಿಮಾ ಒಟ್ಟು 30.70 ಕೋಟಿ ರೂಪಾಯಿ ಗಳಿಸಿದೆ. ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು ಎಂಬ ಕಾರಣಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾಗೆ ಬಹಿಷ್ಕಾರದ ಕರೆಗಳನ್ನೂ ನೀಡಲಾಗಿತ್ತು.