ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಪಠಾಣ್': ಮೂರೇ ದಿನದಲ್ಲಿ 300 ಕೋಟಿ ಕಲೆಕ್ಷನ್
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಬಾಚಿದೆ.
Published: 28th January 2023 06:47 PM | Last Updated: 28th January 2023 06:47 PM | A+A A-

ಪಠಾಣ್ ಚಿತ್ರದಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಬಾಚಿದೆ.
ಪಠಾಣ್ ಚಿತ್ರ ವಿವಾದದ ನಡುವೆಯೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರ ವಿಶ್ವಾದ್ಯಂತ ಒಟ್ಟು 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.
ಇದನ್ನು ಓದಿ: ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಪಠಾಣ್': ಕೆಜಿಎಫ್-2 ದಾಖಲೆ ಉಡೀಸ್!
ಪಠಾಣ್ ಚಿತ್ರ ಮೂರನೇ ದಿನವೂ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಮೊದಲ ಮೂರು ದಿನದಲ್ಲೇ 300 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಅತೀ ವೇಗವಾಗಿ 300 ಕೋಟಿ ಕಲೆಕ್ಷನ್ ಮಾಡಿದ ಮೊಟ್ಟ ಮೊದಲ ಬಾಲಿವುಡ್ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾಗಿದೆ.
ಯಶ್ ರಾಜ್ ಫಿಲ್ಮ್ಸ್(YRF) ಪ್ರಕಾರ, ಎಸ್‌ಆರ್‌ಕೆ-ದೀಪಿಕಾ ಪಡುಕೋಣೆ ಅಭಿನಯದ ಹಿಂದಿ ಚಿತ್ರ 38 ಕೋಟಿ ಗಳಿಸಿದರೆ, ಡಬ್ಬಿಂಗ್ ಫಾರ್ಮ್ಯಾಟ್‌ಗಳಿಂದ ಮೂರನೇ ದಿನದಲ್ಲಿ ರೂ 1.25 ಕೋಟಿ ಗಳಿಸಿದೆ. ಜನವರಿ 25 ರಂದು ಪಠಾಣ್ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿತ್ತು.
"ಮೂರನೇ ದಿನದ ಒಟ್ಟು ಭಾರತದ ಕಲೆಕ್ಷನ್ 47 ಕೋಟಿ ರೂಪಾಯಿ ಆಗಿದ್ದು, ವಿದೇಶಗಳಲ್ಲಿ 43 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಮೂರನೇ ದಿನದ ಒಟ್ಟು ಕಲೆಕ್ಷನ್ 90 ಕೋಟಿ ರೂಪಾಯಿ ಎಂದು" ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕು ವರ್ಷಗಳ ಬಳಿಕ ತೆರೆ ಕಂಡಿರುವ ಶಾರುಖ್ ಖಾನ್ ಅವರ ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಮೊದಲ ದಿನವೇ ಜಾಗತಿಕವಾಗಿ ರೂ 106 ಕೋಟಿ ಗಳಿಸಿದ್ದು, ನಂತರ ಎರಡು ದಿನದಲ್ಲಿ 113.6 ಕೋಟಿ ಗಳಿಸಿತ್ತು.