ತಾಯಿಯ ಸಾವನ್ನು ಖಚಿತಪಡಿಸಿದ ರಾಖಿ ಸಾವಂತ್: 'ನಾನು ನಿನ್ನನ್ನು ಪ್ರೀತಿಸುತ್ತೇನೆ, ಮಾ' ಎಂದ ನಟಿ
ಭಾನುವಾರ ಮುಂಜಾನೆ ನಟಿ ರಾಖಿ ಸಾವಂತ್ ಅವರು ತಮ್ಮ ತಾಯಿ ಜಯಾ ಭೇದಾ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.
Published: 29th January 2023 11:25 AM | Last Updated: 29th January 2023 11:25 AM | A+A A-

ತನ್ನ ತಾಯಿಯೊಂದಿಗೆ ನಟಿ ರಾಖಿ ಸಾವಂತ್
ಮುಂಬೈ: ಭಾನುವಾರ ಮುಂಜಾನೆ ನಟಿ ರಾಖಿ ಸಾವಂತ್ ಅವರು ತಮ್ಮ ತಾಯಿ ಜಯಾ ಭೇದಾ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.
73 ವರ್ಷದ ಭೇದಾ ಅವರು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಿಧನರಾದರು ಎಂದು ಶ್ವಾಸಕೋಶ ಶಾಸ್ತ್ರಜ್ಞ ಮತ್ತು ಕ್ರಿಟಿಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ & ರಿಸರ್ಚ್ ಸೆಂಟರ್‌ನ ನಿರ್ದೇಶಕ ಜುಹು ದೀಪಕ್ ನಾಮಜೋಶಿ ತಿಳಿಸಿದ್ದಾರೆ.
ತನ್ನ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, ತನ್ನ ತಾಯಿಯ ಅಂತ್ಯಕ್ರಿಯೆಯನ್ನು ಭಾನುವಾರ ಮಧ್ಯಾಹ್ನ ಇಲ್ಲಿನ ಮುನ್ಸಿಪಲ್ ಕ್ರಿಶ್ಚಿಯನ್ ಸ್ಮಶಾನದಲ್ಲಿ ನಡೆಸಲಾಗುವುದು ಎಂದು ರಾಖಿ ಸಾವಂತ್ ಹೇಳಿದ್ದಾರೆ.
'ಆಳವಾದ ದುಃಖದಿಂದ, ನಾನು ರಾಖಿ ಸಾವಂತ್, ನನ್ನ ಪ್ರೀತಿಯ ತಾಯಿಯ ಹಠಾತ್ ಸಾವಿನ ಬಗ್ಗೆ ನಿಮಗೆ ತಿಳಿಸುತ್ತಿದ್ದೇನೆ. ಅವರು ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿದ್ದರು ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿದೆ. ಅವರು ನಿಧನರಾದರು ಎಂದು ಹೇಳಲು ನನಗೆ ಬೇಸರವಾಗಿದೆ. ಮಧ್ಯಾಹ್ನ 12 ಗಂಟೆಗೆ ನನ್ನ ತಾಯಿಯ ಅಂತ್ಯಕ್ರಿಯೆಗೆ ನಮ್ಮೊಂದಿಗೆ ಸೇರಿಕೊಳ್ಳಿ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಮಜೋಶಿ ಪ್ರಕಾರ, ಸಾವಂತ್ ಅವರ ತಾಯಿಗೆ ನಾಲ್ಕನೇ ಹಂತದ ಎಂಡೊಮೆಟ್ರಿಯಲ್ ಕ್ಯಾನ್ಸರ್ ಇತ್ತು, ಅದು ಮೆದುಳು, ಶ್ವಾಸಕೋಶ ಮತ್ತು ಯಕೃತ್ತಿಗೆ ಹರಡಿತ್ತು. ಆಕೆಯನ್ನು ಹದಿನೈದು ದಿನಗಳ ಹಿಂದೆ ಈ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ಮೊದಲು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಇಲ್ಲಿಗೆ ಕರೆತರಲಾಯಿತು' ಎಂದು ಅವರು ಶನಿವಾರ ರಾತ್ರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದರು.
ಇದನ್ನೂ ಓದಿ: ಬಾಲಿವುಡ್ ನಟಿ ರಾಖಿ ಸಾವಂತ್ ತಾಯಿ ವಿಧಿವಶ
ಸಾವಂತ್ ತನ್ನ ತಾಯಿಯ ಸಾವಿನ ಬಗ್ಗೆ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ತಿಳಿಸುವ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 'ಇಂದು ನನ್ನ ತಾಯಿ ನನ್ನನ್ನು ಅಗಲಿದ್ದಾರೆ ಮತ್ತು ನಾನು ಕಳೆದುಕೊಳ್ಳು ಇನ್ನೇನು ಉಳಿದಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಮಾ. ಈಗ ನನ್ನ ಮಾತು ಕೇಳುವವರು ಯಾರು, ಅಪ್ಪಿಕೊಳ್ಳುವವರು ಯಾರು? ಐ ಮಿಸ್ ಯು, ಆಯಿ' ಎಂದು ಆಸ್ಪತ್ರೆಯಲ್ಲಿ ತನ್ನ ತಾಯಿಯೊಂದಿಗಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ಹೇಳಿದ್ದಾರೆ.
ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದ ನಟಿ ರಾಖಿ ಸಾವಂತ್, ಆಗಾಗ್ಗೆ ತನ್ನ ತಾಯಿಯ ಆರೋಗ್ಯದ ಬಗ್ಗೆ ಪಾಪರಾಜಿಗಳೊಂದಿಗೆ ಮಾತನಾಡುತ್ತಿದ್ದರು.