ವಿವಾದದ ನಡುವೆಯೇ ಪಠಾಣ್‌ಗೆ ಯಶಸ್ಸು; ತಮ್ಮ ಮನೆಯ ಹೊರಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಶಾರುಖ್ ಖಾನ್
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ 'ಪಠಾನ್' ಕಳೆದ ವಾರ ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ವಿವಾದಗಳ ನಡುವೆಯೂ ಪಠಾಣ್ ಯಶಸ್ಸು ಸಾಧಿಸುತ್ತಿದ್ದು, ಕಳೆದ ರಾತ್ರಿ ಶಾರುಖ್ ಅವರ ಬಾಂದ್ರಾ ಮನೆಯ ಹೊರಗೆ ಜಮಾಯಿಸಿದ್ದ ಹಲವಾರು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
Published: 30th January 2023 11:12 AM | Last Updated: 27th February 2023 05:56 PM | A+A A-

ಶಾರುಖ್ ಖಾನ್
ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ 'ಪಠಾನ್' ಕಳೆದ ವಾರ ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ವಿವಾದಗಳ ನಡುವೆಯೂ ಪಠಾಣ್ ಯಶಸ್ಸು ಸಾಧಿಸುತ್ತಿದ್ದು, ಕಳೆದ ರಾತ್ರಿ ಶಾರುಖ್ ಅವರ ಬಾಂದ್ರಾ ಮನೆಯ ಹೊರಗೆ ಜಮಾಯಿಸಿದ್ದ ಹಲವಾರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಹಲವಾರು ಅಭಿಮಾನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಹಲವಾರು ಫೋಟೊಗಳನ್ನು ಕ್ಲಿಕ್ ಮಾಡಲು ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಲು ನಟನಿಗಾಗಿ ಕಾಯುತ್ತಿದ್ದರು.
Mehmaan Nawaazi Pathaan ke ghar par… Thank u all my Mehmaans for making my Sunday so full of love. Grateful. Happy. Loved. pic.twitter.com/ivfpK07Vus
— Shah Rukh Khan (@iamsrk) January 29, 2023
ಸಂಪೂರ್ಣ ಕಪ್ಪು ಮತ್ತು ಬಂದಾನ ಧರಿಸಿದ್ದ ಶಾರುಖ್ ಭಾನುವಾರ ಮುಂಬೈನ ಹೆಗ್ಗುರುತುಗಳಲ್ಲಿ ಒಂದಾದ ತಮ್ಮ ಸಮುದ್ರಾಭಿಮುಖವಾದ ಬಂಗಲೆ 'ಮನ್ನತ್' ನ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: ನಾಲ್ಕೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ಪಠಾಣ್' ಸಿನಿಮಾ
ಸೋಮವಾರ ಮುಂಜಾನೆ 57 ವರ್ಷದ ನಟ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಪರಾ ಸಂಖ್ಯೆಯ ಅಭಿಮಾನಿಗಳು ಶಾರುಖ್ ಅವರ ನಿವಾಸದ ಮುಂದೆ ಜಮಾಯಿಸಿ ತಮ್ಮ ನೆಚ್ಚಿನ ನಟನನ್ನು ತಮ್ಮ ಫೋನುಗಳಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂತು. ಅಭಿಮಾನಿಗಳು ಬಸ್ ಮತ್ತು ಕಾರುಗಳಲ್ಲಿ ಬಂದಿದ್ದರು.
ಮೆಹಮಾನ್ ನವಾಜಿ ಪಠಾಣ್ ಕೆ ಘರ್ ಪಾರ್. ನನ್ನ ಭಾನುವಾರವನ್ನು ತುಂಬಾ ಪ್ರೀತಿಯಿಂದ ತುಂಬಿದ್ದಕ್ಕಾಗಿ ನನ್ನ ಎಲ್ಲಾ ಮೆಹಮಾನ್‌ಗಳಿಗೆ ಧನ್ಯವಾದಗಳು. ಕೃತಜ್ಞ. ಸಂತೋಷ. ಪ್ರೀತಿಸುತ್ತೇನೆ ಎಂದಿರುವ ಅವರು 'ಪಠಾನ್' ಸಿನಿಮಾದ ಜನಪ್ರಿಯ ಡೈಲಾಗ್ ಅನ್ನು ಉಲ್ಲೇಖಿಸಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ: ಈ ದೇಶಕ್ಕೆ ಖಾನ್‌ಗಳ ಮೇಲೆ ಮಾತ್ರ ಪ್ರೀತಿ: ಮುಸ್ಲಿಂ ನಟಿಯರ ಮೇಲೆ ವ್ಯಾಮೋಹ; ಪಠಾಣ್ ಯಶಸ್ಸಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ
ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗಿರುವ ಶಾರುಖ್ ಅವರ ಮೊದಲ ಸಿನಿಮಾ ಪಠಾಣ್, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಟವನ್ನು ಮುಂದುವರೆಸಿದೆ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವದಾದ್ಯಂತ 429 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ನಿರ್ಮಾಣ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಭಾನುವಾರ ಹೇಳಿದೆ. ಈ ಮೂಲಕ ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್ ಸೇರಿದ ಬಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮುಂತಾದವರು ನಟಿಸಿದ್ದಾರೆ. 'ಪಠಾಣ್' ಜನವರಿ 25 ರಂದು ಬಿಡುಗಡೆಯಾಗಿದೆ.