'ಶಾರುಖ್ ಖಾನ್ ನಟ ಅಲ್ಲ, ಅವರೊಂದು ಭಾವನೆ, ದೇಶದ ನಂಬರ್ 1 ಆಕ್ಷನ್ ಹೀರೋ': ಜಾನ್ ಅಬ್ರಹಾಂ
ಶಾರೂಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್ ಚಿತ್ರ' ಬಾಕ್ಸಾಫೀಸ್ ನಲ್ಲಿ ಗೆದ್ದಿದೆ. 6 ದಿನಗಳಲ್ಲಿ 500 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರು ನೆಚ್ಚಿಕೊಂಡ ನಂತರ ಚಿತ್ರತಂಡ ನಿನ್ನೆ ಮುಂಬೈಯಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.
Published: 31st January 2023 01:17 PM | Last Updated: 31st January 2023 05:23 PM | A+A A-

ಪಠಾಣ್ ಯಶಸ್ಸಿನ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಶಾರೂಕ್ ಖಾನ್-ಜಾನ್ ಅಬ್ರಹಾಂ
ಮುಂಬೈ: ಶಾರೂಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್ ಚಿತ್ರ' ಬಾಕ್ಸಾಫೀಸ್ ನಲ್ಲಿ ಗೆದ್ದಿದೆ. 6 ದಿನಗಳಲ್ಲಿ 500 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರು ನೆಚ್ಚಿಕೊಂಡ ನಂತರ ಚಿತ್ರತಂಡ ನಿನ್ನೆ ಮುಂಬೈಯಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.
ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಚಿತ್ರದ ವಿಲನ್ ಪಾತ್ರಧಾರಿ ನಟ ಜಾನ್ ಅಬ್ರಹಾಂ ಮಾತನಾಡುತ್ತಾ ಶಾರೂಕ್ ಖಾನ್ ರನ್ನು ಹೊಗಳಿದ್ದಾರೆ. ಶಾರೂಕ್ ಮತ್ತು ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ, ಶಾರುಖ್ ಕೇವಲ ನಟರಲ್ಲ, ಶಾರೂಕ್ ಎಂದರೆ ಈ ದೇಶದಲ್ಲಿ ಒಂದು ಭಾವನೆ ಎಂದು ನಾನು ನಂಬುತ್ತೇನೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಇಡೀ ರಾಷ್ಟ್ರವು ಶಾರೂಕ್ ಖಾನ್ ಚಿತ್ರಕ್ಕಾಗಿ ಕಾಯುತ್ತಿತ್ತು. ಪ್ರೇಕ್ಷಕರ ನಿರೀಕ್ಷೆಯನ್ನು ಅವರು ಹುಸಿ ಮಾಡಲಿಲ್ಲ ಎಂದರು.
ಇದನ್ನೂ ಓದಿ: ಬಾಲಿವುಡ್: ವಾರಾಂತ್ಯಕ್ಕೆ 500 ಕೋಟಿ ರೂ ಗಡಿ ದಾಟಿದ ಶಾರುಖ್ ಖಾನ್ ರ ಪಠಾಣ್ ಚಿತ್ರ ಗಳಿಕೆ!
ಇದುವರೆಗೆ ನಾನು ಆಕ್ಷನ್ ಹೀರೋ ಎಂದು ಭಾವಿಸಿಕೊಂಡಿದ್ದೆ, ಆದರೆ, ಈಗ ಶಾರುಖ್ ಖಾನ್ ನಂಬರ್ ಒನ್ ಆಕ್ಷನ್ ಹೀರೋ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಹಿಂದೆಯೇ ಅವರು ಆಕ್ಷನ್ ಹೀರೋ ಯಾಕಾಗಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ. "ನೀವು ದೇಶದ ರಾಷ್ಟ್ರೀಯ ಸಂಪತ್ತು, ನಾನು ನಿಮ್ಮನ್ನು ಹೊಡೆಯಲು ಸಾಧ್ಯವಿಲ್ಲ" ಎಂದು ನಾನು ಹಿಂದೆಯೇ ಶಾರೂಕ್ ಅವರಿಗೆ ಹೇಳಿದ್ದೆ ಎಂದು ಜಾನ್ ಅಬ್ರಹಾಂ ನೆನಪಿಸಿಕೊಂಡರು.
ಇನ್ನು ಇದೇ ಸಂದರ್ಭದಲ್ಲಿ ನಾಯಕಿ ದೀಪಿಕಾ ಪಡುಕೋಣೆಯನ್ನು ಕೂಡ ಹೊಗಳಿದ ಜಾನ್, ನಾನು ದೀಪಿಕಾರ ಜೊತೆ ನಟಿಸುತ್ತಿರುವುದು ಇದೇ ಮೊದಲ ಸಲ. ಅದ್ಭುತವಾಗಿ ನಟಿಸಿದ್ದಾರೆ ಮತ್ತು ಅದ್ಬುತ ವ್ಯಕ್ತಿ ಕೂಡ. ‘ಬೇಷರಂ ರಂಗ್’ ಹಾಡಿನಲ್ಲಿ ಶಾರೂಕ್ ಮತ್ತು ದೀಪಿಕಾ ಅತ್ಯಂತ ಸುಂದರ ಪುರುಷ ಮತ್ತು ಅತ್ಯಂತ ಸುಂದರ ಮಹಿಳೆಯಾಗಿ ಕಂಗೊಳಿಸುತ್ತಾರೆ ಎಂದರು.
Pathaan Jim #Pathaan pic.twitter.com/yfjDLcIIAK
— Yash Raj Films (@yrf) January 30, 2023