ಸೋದರನ ಮದುವೆಯಲ್ಲಿ ಮಿಂಚಿದ ಸೌತ್ ಬ್ಯೂಟಿ ಪೂಜಾ ಹೆಗ್ಡೆ
ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ (Pooja Hegde) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ನಟಿ ಸಹೋದರನ ಮದುವೆಯಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ.
Published: 31st January 2023 09:20 AM | Last Updated: 31st January 2023 05:08 PM | A+A A-

ಸೋದರನ ಜೊತೆ ಪೂಜಾ ಹೆಗ್ಡೆ
ಬೆಂಗಳೂರು: ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ (Pooja Hegde) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ನಟಿ ಸಹೋದರನ ಮದುವೆಯಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ-ವಿಡಿಯೊ ಹಂಚಿಕೊಂಡಿದ್ದಾರೆ. ಭಾವುಕ ಬರಹ ಮೂಲಕ ಅತ್ತಿಗೆಗೆ ಸ್ವಾಗತ ಕೋರಿದ್ದಾರೆ.
ಬಾಲಿವುಡ್ ಸೇರಿದಂತೆ ದಕ್ಷಿಣದ ಚಿತ್ರರಂಗಲ್ಲಿ ಹೆಸರು ಗಳಿಸಿರುವ ನಟಿ ಪೂಜಾ ಹೆಗ್ಡೆ ಅವರ ಮನೆಯಲ್ಲಿ ಅಣ್ಣನ ಮದುವೆ ಸಂಭ್ರಮ. ಅಣ್ಣ ರಿಷಬ್ ಹೆಗ್ಡೆ ಮದುವೆಯಲ್ಲಿ ಕೇಸರಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ.
ಮದುವೆ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಬರೆದಿರುವ ನಟಿ, ನನ್ನ ಸಹೋದರ ಆತನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದಾನೆ. ನಾನು ಸಂತೋಷದಿಂದ ಕಣ್ಣೀರಿಟ್ಟೆ, ಜೊತೆ ಜೊತೆಗೆ ಮಗುವಿನಂತೆ ನಕ್ಕೆ, ಅಣ್ಣ ನೀನು ನಿನ್ನ ಜೀವನದ ಮತ್ತೊಂದು ಹಂತಕ್ಕೆ ಕಾಲಿರಿಸಿದ್ದು, ನಿನ್ನ ಜೀವನದಲ್ಲಿ ಪ್ರೀತಿ ಶಾಂತಿ ಎಲ್ಲವೂ ತುಂಬಿರಲಿ.