ಕಾಮಿಕ್-ಕಾನ್ ನಲ್ಲಿ 'ಪ್ರಾಜೆಕ್ಟ್ ಕೆ' ತಾರೆಯರಿಂದ ಚಿತ್ರದ ಶೀರ್ಷಿಕೆ, ಟ್ರೈಲರ್ ಅನಾವರಣ!
ಭಾರತೀಯ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ವೈಜ್ಞಾನಿಕ ಚಲನಚಿತ್ರ ಪ್ರಾಜೆಕ್ಟ್ ಕೆ' ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಪ್ರದರ್ಶನಗೊಳ್ಳಲಿದೆ.
Published: 07th July 2023 01:06 PM | Last Updated: 07th July 2023 01:06 PM | A+A A-

ದೀಪಿಕಾ ಪಡುಕೋಣೆ, ಪ್ರಭಾಸ್, ಕಮಲ್ ಹಾಸನ್
ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ವೈಜ್ಞಾನಿಕ ಚಲನಚಿತ್ರ ಪ್ರಾಜೆಕ್ಟ್ ಕೆ' ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಪ್ರದರ್ಶನಗೊಳ್ಳಲಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಕಾಮಿಕ್ ಕಾನ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರವಾಗಿದೆ.
ಜುಲೈ 20 ರಿಂದ 23 ರವರೆಗೆ ನಡೆಯಲಿರುವ ಕಾಮಿಕ್-ಕಾನ್‌ನಲ್ಲಿ, ವೈಜಯಂತಿ ಚಿತ್ರಗಳ ನಿರ್ಮಾಪಕರಿಂದ ಸಂಭಾಷಣೆ. ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ.
ಎಸ್ ಡಿಸಿಸಿಯ ಮೊದಲ ದಿನ ಪ್ರಾಜೆಕ್ಟ್ ಕೆ' ಚಿತ್ರದ ಶೀರ್ಷಿಕೆ, ಟ್ರೈಲರ್ ಮತ್ತು ಬಿಡುಗಡೆ ದಿನಾಂಕವನ್ನು ಹಾಸನ್, ಪ್ರಭಾಸ್, ದೀಪಿಕಾ ಮತ್ತು ಅಶ್ವಿನ್ ಅವರು ಅನಾವರಣಗೊಳಿಸಲಿದ್ದಾರೆ. ಬಹುಭಾಷಾ ವೈಜ್ಞಾನಿಕ ಚಿತ್ರದಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾನಿ ಕೂಡಾ ಅಭಿನಯಿಸಿದ್ದಾರೆ.