ಚೆಕ್ ಬೌನ್ಸ್ ಪ್ರಕರಣ: ರಾಂಚಿ ಕೋರ್ಟ್ ನಲ್ಲಿ ಹಾಜರಾದ ಬಾಲಿವುಡ್ ನಟಿ ಅಮೀಶಾ ಪಟೇಲ್

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಸೋಮವಾರ ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದರು. ಹಿರಿಯ ವಿಭಾಗೀಯ ನ್ಯಾಯಾಧೀಶ ಡಿ ಎನ್ ಶುಕ್ಲಾ ಅವರ ಮುಂದೆ ಹಾಜರಾದ ಅಮೀಶಾ ಪಟೇಲ್, ಪ್ರಕರಣದಲ್ಲಿ ತಾನು ನಿರಾಪರಾಧಿ ಎಂದು ಹೇಳಿದರು.
ಅಮೀಶಾ ಪಟೇಲ್
ಅಮೀಶಾ ಪಟೇಲ್

ರಾಂಚಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಸೋಮವಾರ ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದರು. ಹಿರಿಯ ವಿಭಾಗೀಯ ನ್ಯಾಯಾಧೀಶ ಡಿ ಎನ್ ಶುಕ್ಲಾ ಅವರ ಮುಂದೆ ಹಾಜರಾದ ಅಮೀಶಾ ಪಟೇಲ್, ಪ್ರಕರಣದಲ್ಲಿ ತಾನು ನಿರಾಪರಾಧಿ ಎಂದು ಹೇಳಿದರು.

ಜಾರ್ಖಂಡ್ ಮೂಲದ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರು ಅಮೀಶಾ ವಿರುದ್ಧ 2018ರಲ್ಲಿ ದಾಖಲಿಸಿದ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ಇದಾಗಿದೆ.  'ದೇಸಿ ಮ್ಯಾಜಿಕ್'  ಚಿತ್ರ ನಿರ್ಮಾಣಕ್ಕಾಗಿ ಸಿಂಗ್ ಅವರು ನಟಿ ಬ್ಯಾಂಕ್ ಖಾತೆಗೆ 2.5 ಕೋಟಿ ರೂ. ವರ್ಗಾಯಿಸಿದ್ದರು ಎನ್ನಲಾಗಿದೆ. ಆದರೆ,  ಚಿತ್ರ ಮುಂದುವರಿಸದ ಅಮೀಶಾ ನಂತರ ನಂತರ 2.5 ಕೋಟಿ ಚೆಕ್ ಕಳುಹಿಸಿದರು. ಆದರೆ ಅದು ಬೌನ್ಸ್ ಆಗಿತ್ತು ಎಂದು ಅರ್ಜಿದಾರರು ಆರೋಪಿಸಿದ್ದಾರೆ. 

ಜೂನ್ 21 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅಮೀಶಾ ಅವರಿಗೆ ಹೇಳಲಾಗಿತ್ತು ಎಂದು ದೂರುದಾರರ ಪರ ವಕೀಲ ಸ್ಮಿತಾ ಪಾಠಕ್ ಹೇಳಿದ್ದಾರೆ. ಆದರೆ ಪೂರ್ವ ಯೋಜಿತ ನಿಶ್ಚಿತಾರ್ಥ ಉಲ್ಲೇಖಿಸಿ ಅವರು ಹಾಜರಾಗಿರಲಿಲ್ಲ 
ಈ ಪ್ರಕರಣದಲ್ಲಿ ರಾಜಿಗೆ ಒತ್ತಾಯಿಸಿದ್ದೇವೆ ಎಂದು ಪಾಠಕ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com