ಲೈವ್ ಶೋ ವೇಳೆ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟು, ವಿಡಿಯೋ ವೈರಲ್!
ನಿಶಾ ಉಪಾಧ್ಯಾಯ ಭೋಜ್‌ಪುರಿಯ ಜನಪ್ರಿಯ ಜಾನಪದ ಗಾಯಕಿಗಳಲ್ಲಿ ಒಬ್ಬರು. ಅವರು ತಮ್ಮ ಧ್ವನಿಯಿಂದ ಜನರ ಮೇಲೆ ಸಾಕಷ್ಟು ಮ್ಯಾಜಿಕ್ ಮಾಡಿದ್ದಾರೆ. ಅವರು ಲೈವ್ ಶೋ ಮಾಡುವಾಗಲೆಲ್ಲಾ ಅಭಿಮಾನಿಗಳ ಅಪಾರ ದಂಡು ಸೇರುತ್ತಿತ್ತು. ಆದರೆ, ಲೈವ್ ಶೋ ವೇಳೆ ಅಭಿಮಾನಿಯೊಬ್ಬ ಗುಂಡು ಹಾರಿಸಿದ್ದಾನೆ.
Published: 01st June 2023 09:19 PM | Last Updated: 01st June 2023 09:19 PM | A+A A-

ನಿಶಾ ಉಪಾಧ್ಯಾಯ
ನಿಶಾ ಉಪಾಧ್ಯಾಯ ಭೋಜ್‌ಪುರಿಯ ಜನಪ್ರಿಯ ಜಾನಪದ ಗಾಯಕಿಗಳಲ್ಲಿ ಒಬ್ಬರು. ಅವರು ತಮ್ಮ ಧ್ವನಿಯಿಂದ ಜನರ ಮೇಲೆ ಸಾಕಷ್ಟು ಮ್ಯಾಜಿಕ್ ಮಾಡಿದ್ದಾರೆ. ಅವರು ಲೈವ್ ಶೋ ಮಾಡುವಾಗಲೆಲ್ಲಾ ಅಭಿಮಾನಿಗಳ ಅಪಾರ ದಂಡು ಸೇರುತ್ತಿತ್ತು. ಆದರೆ, ಲೈವ್ ಶೋ ವೇಳೆ ಅಭಿಮಾನಿಯೊಬ್ಬ ಗುಂಡು ಹಾರಿಸಿದ್ದಾನೆ.
ಮಾಧ್ಯಮ ವರದಿಗಳ ಪ್ರಕಾರ, ನಿಶಾ ಪ್ರದರ್ಶನ ನೀಡಲು ಬಿಹಾರದ ಸರನ್ ಜಿಲ್ಲೆಗೆ ಆಗಮಿಸಿದ್ದರು. ನಿಶಾ ಲೈವ್ ಶೋ ನೀಡುತ್ತಿದ್ದ ವೇಳೆ ಯಾರೋ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ವೇಳೆ ಗಾಯಕಿಯ ಎಡಗಾಲಿಗೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ನಿಶಾಳನ್ನು ಸಮೀಪದ ಪಾಟ್ನಾದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ, ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ.
ಆದಾಗ್ಯೂ, ನಿಶಾ ಉಪಾಧ್ಯಾಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸಕ್ರಿಯರಾಗಿರುತ್ತಾರೆ. ಫೇಸ್‌ಬುಕ್‌ನಲ್ಲಿ ಅವರ ಅಭಿನಯದ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ, ಜನರು ಅವರ ವೀಡಿಯೊಗಳ ಮೇಲೆ ಸಾಕಷ್ಟು ಅಭಿಮಾನ ವ್ಯಕ್ತಪಡಿಸುತ್ತಾರೆ. ನಿಶಾರ ಲೇ ಲೇ ಆಯೆ ಕೋಕಾ ಕೋಲಾ, ನವಕರ್ ಮಂತ್ರ, ಹಸಿ ಹಸಿ ಜಾನ್ ಮರೇಲಾ, ಇವುಗಳು ಅವರ ಕೆಲವು ಹಾಡುಗಳು ಸಾಕಷ್ಟು ಹಿಟ್ ಆಗಿವೆ. ಅವರ ಹಾಡುಗಳು ಹೆಚ್ಚಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತವೆ.
ಇಂದು ನಿಶಾ ಉಪಾಧ್ಯಾಯ ಭೋಜ್‌ಪುರಿ ಚಿತ್ರರಂಗದ ಚಿರಪರಿಚಿತ ಮುಖ. ತಮ್ಮ ಅದ್ಬುತ ಕಂಠದಿಂದ ಜನರಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಇವರಿಗೆ ಸ್ಟ್ರಾಂಗ್ ಫ್ಯಾನ್ ಫಾಲೋಯಿಂಗ್ ಇದೆ. ಅವರ ಫೇಸ್ ಬುಕ್ ಪೇಜ್ ನಲ್ಲಿ 10 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಿಶಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ. ಅಲ್ಲಿ ಅವಳು ಆಗಾಗ್ಗೆ ತನ್ನ ಹಾಡುಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.