ಜುಹುವಿನಲ್ಲಿ ಊರ್ವಶಿ ರೌಟೇಲಾ 190 ಕೋಟಿ ರು ಮನೆ ಖರೀದಿ?
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಳೆದ ಏಳೆಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಅವರು ಕೋಟಿ ಬೆಲೆ ಬಾಳುವ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ.
Published: 02nd June 2023 01:33 PM | Last Updated: 02nd June 2023 07:38 PM | A+A A-

ಊರ್ವಶಿ ರೌಟೇಲಾ
ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಸುದ್ದಿಯಲ್ಲಿದ್ದಾರೆ. ಊರ್ವಶಿ ರೌಟೇಲಾ ಕಳೆದ ಏಳೆಂಟು ತಿಂಗಳಿಂದ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈಗ ಅವರು ಕೋಟಿ ಬೆಲೆ ಬಾಳುವ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ.
ನಟಿ ಊರ್ವಶಿ ರೌಟೇಲಾ 190 ಕೋಟಿ ಮೌಲ್ಯದ ಮುಂಬೈ ಮನೆಯಲ್ಲಿ ತಂಗಿದ್ದಾರೆ. ಮುಂಬೈನಲ್ಲಿರುವ ನಟಿ ಮನೆ ಐಷಾರಾಮಿಯಾಗಿದೆ. ದಿವಂಗತ, ನಿರ್ಮಾಪಕ ಯಶ್ ಚೋಪ್ರಾ ಅವರ ಮನೆಯ ಪಕ್ಕದಲ್ಲಿರುವ ಬಂಗಲೆಗೆ ನಟಿ ಸ್ಥಳಾಂತರಗೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ನಾಲ್ಕು ಅಂತಸ್ತಿನ ಬಂಗಲೆಯು ಅದ್ದೂರಿ ಉದ್ಯಾನ, ಜಿಮ್ ಮತ್ತು ದೊಡ್ಡ ಬಾಲಕ್ಕನಿ ಒಳಗೊಂಡಿದೆ. ಊರ್ವಶಿ ರೌಟೇಲಾ ಅವರ ಈ ಬಂಗಲೆಯ ಬೆಲೆ 190 ಕೋಟಿ ರೂ. ಬೆಲೆ ಬಾಳುತ್ತದೆ. ಈ ಮನೆಯ ಒಳ ವಿನ್ಯಾಸ ತುಂಬಾ ವಿಶೇಷವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಕಿಡಿಕಾರಿ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಊರ್ವಶಿ ತಾಯಿ ಮೀರಾ ರೌಟೆಲಾ ಅವರು ಓ ದೇವಾ...! ಇದು ಸುಳ್ಳು ಸುದ್ದಿ, ಇಂತಹ ದಿನ ನಮಗೆ ಬೇಗ ಬರಲಿ ಎಂದು ಆಶಿಸುತ್ತೇನೆ.. ಇಂತ ಸುದ್ದಿ ಹಬ್ಬಿಸಿದ ಮಾಧ್ಯಮಗಳ ಪ್ರಾರ್ಥನೆ ಫಲಿಸಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಬಗ್ಗೆ ನಟಿ ಊರ್ವಶಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.