ಮೊದಲ ದಿನವೇ 5.49 ಕೋಟಿ ರೂ. ಬಾಚಿದ 'ಜರಾ ಹಟ್ಕೆ ಜರಾ ಬಚ್ಕೆ'
ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಬಾಲಿವುಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಮೊದಲ ದಿನವೇ 5.49 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ...
Published: 03rd June 2023 04:28 PM | Last Updated: 03rd June 2023 05:53 PM | A+A A-

ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್
ಮುಂಬೈ: ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಬಾಲಿವುಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಮೊದಲ ದಿನವೇ 5.49 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ ಹೇಳಿದ್ದಾರೆ.
ಲುಕಾ ಚುಪ್ಪಿ ಮತ್ತು ಮಿಮಿ ಖ್ಯಾತಿಯ ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರದ ದಿನದ ಮೊದಲ ದಿನದ ನೆಟ್ ಬಾಕ್ಸ್ ಆಫೀಸ್ ಗಳಿಕೆಯ ಪೋಸ್ಟರ್‌ನಲ್ಲಿ ಹಂಚಿಕೊಂಡಿದೆ.
ಇದನ್ನು ಓದಿ: ಹಠಾತ್ ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೆ ಬಂದ ಜೆಕೆ: ಕಾರಣ ಏನು?
ಜರಾ ಹಟ್ಕೆ ಜರಾ ಬಚ್ಕೆ ಪಯಣ ಆರಂಭಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಗಳಿಸಬಹುದು ಎಂದು ಊಹಿಸಿದ್ದ ನಿರಾಶಾವಾದಿಗಳನ್ನು ಮೌನಗೊಳಿಸಿದೆ. ಮೊದಲ ದಿನವೇ 5.49 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.