50ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 'ಬಿಗ್ ಬಿ': ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಅಮಿತಾಬ್ ಬಚ್ಚನ್
ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಭಾನುವಾರ ತಮ್ಮ 50ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಮತ್ತು ಪತ್ನಿ ಜಯಾ ಬಚ್ಚನ್ ಅವರಿಗೆ ಶುಭಾಶಯ ಕೋರಿದ್ದಕ್ಕಾಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Published: 05th June 2023 07:22 AM | Last Updated: 05th June 2023 06:09 PM | A+A A-

ಅಮಿತಾಬ್ ಬಚ್ಚನ್
ಮುಂಬೈ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಭಾನುವಾರ ತಮ್ಮ 50ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಮತ್ತು ಪತ್ನಿ ಜಯಾ ಬಚ್ಚನ್ ಅವರಿಗೆ ಶುಭಾಶಯ ಕೋರಿದ್ದಕ್ಕಾಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿರಿಯ ನಟ ಜೂನ್ 3, 1973 ರಂದು ತಮ್ಮ ಆಗಿನ ಸಹನಟಿಯಾಗಿದ್ದ ಜಯ ಭಾದುರಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಲೇಖಕಿ ಶ್ವೇತಾ ಬಚ್ಚನ್ ನಂದಾ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಮಕ್ಕಳಾಗಿದ್ದಾರೆ.
ತಮ್ಮ 50ನೇ ವಿವಾಹ ವಾರ್ಷಿಕೋತ್ಸವದ ಒಂದು ದಿನದ ನಂತರ, ಅಮಿತಾಬ್ ಬಚ್ಚನ್ ಹಿತೈಷಿಗಳಿಗೆ, ಅವರ ಪ್ರೀತಿಗಾಗಿ ಧನ್ಯವಾದ ಹೇಳಿದ್ದಾರೆ.
'ನಮ್ಮ 50ನೇ ವಾರ್ಷಿಕೋತ್ಸವಕ್ಕೆ ಜಯಾ ಮತ್ತು ನನಗೆ ಶುಭ ಹಾರೈಸಿದ ಎಲ್ಲರಿಗೂ ನನ್ನ ಆಳವಾದ ಕೃತಜ್ಞತೆಗಳು.. ನಿಮ್ಮ ಪ್ರೀತಿ ಮತ್ತು ಕಾಳಜಿ ನಮಗೆ ಅತ್ಯಂತ ಸಂತೋಷವನ್ನು ನೀಡುತ್ತದೆ' ಎಂದು 80 ವರ್ಷ ವಯಸ್ಸಿನ ಅವರು ಬರೆದಿದ್ದಾರೆ.
ಜೂನ್ 2 ರಂದು ವಿವಾಹ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿದ್ದ ಅಮಿತಾಬ್ ಬಚ್ಚನ್, 'ಜೂನ್ 3 ಕೆಲವೇ ಕ್ಷಣಗಳಲ್ಲಿ ಉದಯಿಸುತ್ತದೆ ಮತ್ತು ವರ್ಷಗಳನ್ನು 50 ಎಂದು ಎಣಿಸಲಾಗುವುದು.. ಪ್ರೀತಿ ಗೌರವ ಮತ್ತು ಶುಭಾಶಯಗಳಿಗೆ ಕೃತಜ್ಞತೆ, ಅದು ಬಂದಿರುವ ಮತ್ತು ಬಹುಶಃ ಬರಬಹುದು..' ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಿಷೇಕ್ ಬಚ್ಚನ್ ತಮ್ಮ ಪೋಷಕರ ಸುವರ್ಣ ಮಹೋತ್ಸವವನ್ನು ಗುರುತಿಸಲು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪೋಷಕರ ಥ್ರೋಬ್ಯಾಕ್ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.
ಅವರ ಅನೇಕ ಗೋಲ್ಡನ್ ಜುಬಿಲಿಗಳ ಪಟ್ಟಿಗೆ ಸೇರಿಸಲಾಗುತ್ತಿದೆ… ಆದರೆ, ಇದು ಅತ್ಯಂತ ವಿಶೇಷವಾದದ್ದು. 50ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಮಾ ಮತ್ತು ಪಾ! ಎಂದು ಅಭಿಷೇಕ್ ಬರೆದಿದ್ದಾರೆ.
ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರು ತಮ್ಮ ಪೋಷಕರ ಏಕವರ್ಣದ ಫೋಟೋವನ್ನು ಪೋಸ್ಟ್ ಮಾಡಿದ್ದು, ಸುದೀರ್ಘ ದಾಂಪತ್ಯದ ರಹಸ್ಯವನ್ನು ವಿವರಿಸಿದ್ದಾರೆ.
ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರು 'ಜಂಜೀರ್', 'ಶೋಲೆ', 'ಅಭಿಮಾನ್', 'ಮಿಲಿ', 'ಚುಪ್ಕೆ ಚುಪ್ಕೆ', 'ಸಿಲ್ಸಿಲಾ' ಮತ್ತು 'ಕಭಿ ಖುಷಿ ಕಭಿ ಗಮ್' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.