ಜಾಕಿ ಶ್ರಾಫ್ ಪತ್ನಿ ಆಯೇಷಾ ಶ್ರಾಫ್‌ಗೆ ಸಿಬ್ಬಂದಿಯಿಂದಲೇ 58 ಲಕ್ಷ ರೂ. ವಂಚನೆ; ದೂರು ದಾಖಲು
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ತಾಯಿ ಆಯೇಷಾ ಶ್ರಾಫ್ ಅವರಿಗೆ ತಮ್ಮ ಮಗನ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದ ಕಿಕ್ ಬಾಕ್ಸರ್‌ನಿಂದ 58.53 ಲಕ್ಷ ರೂ. ವಂಚನೆಯಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Published: 09th June 2023 04:40 PM | Last Updated: 09th June 2023 04:40 PM | A+A A-

ಟೈಗರ್ ಶ್ರಾಫ್‌ರೊಂದಿಗೆ ತಾಯಿ ಆಯೇಷಾ ಶ್ರಾಫ್
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ತಾಯಿ ಆಯೇಷಾ ಶ್ರಾಫ್ ಅವರಿಗೆ ತಮ್ಮ ಮಗನ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದ ಕಿಕ್ ಬಾಕ್ಸರ್‌ನಿಂದ 58.53 ಲಕ್ಷ ರೂ. ವಂಚನೆಯಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಆಯೇಷಾ ಶ್ರಾಫ್ ನೀಡಿರುವ ದೂರಿನ ಪ್ರಕಾರ, ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಫೈಟರ್ ಅಲನ್ ಫರ್ನಾಂಡಿಸ್ ಅವರನ್ನು ಟೈಗರ್ ಶ್ರಾಫ್ ಅವರ ಎಂಎಂಎ ಮ್ಯಾಟ್ರಿಕ್ಸ್ ಕಂಪನಿಯ ಕಾರ್ಯಾಚರಣೆಯ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಕಂಪನಿಯು ಮಿಶ್ರ ಸಮರ ಕಲೆಗಳಲ್ಲಿ ತರಬೇತಿ ನೀಡುತ್ತದೆ ಮತ್ತು ಅದನ್ನು ಆಯೇಷಾ ಶ್ರಾಫ್ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
'ಫರ್ನಾಂಡಿಸ್ ಅವರು 2018 ರಲ್ಲಿ ಎಂಎಂಎ ಮ್ಯಾಟ್ರಿಕ್ಸ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡರು. ಅವರು ಸಂಸ್ಥೆಯ ಮೂಲಕ ಭಾರತ ಮತ್ತು ವಿದೇಶಗಳಲ್ಲಿ 11 ಪಂದ್ಯಾವಳಿಗಳನ್ನು ಆಯೋಜಿಸಲು ಹಣವನ್ನು ಸಂಗ್ರಹಿಸಿದ್ದಾರೆ ಮತ್ತು ಅವರು ತಮ್ಮ ವೈಯಕ್ತಿಕ ಖಾತೆಗೆ 58.53 ಲಕ್ಷ ರೂ.ಗಳನ್ನು ಜಮೆ ಮಾಡಿಕೊಂಡಿದ್ದಾರೆ' ಎಂದು ಎಫ್ಐಆರ್ ಅನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಆಯೇಷಾ ಶ್ರಾಫ್ ಮೇ 3 ರಂದು ದೂರು ದಾಖಲಿಸಿದ್ದು, ನಂತರ ಫರ್ನಾಂಡಿಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಂಚನೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.