ನನ್ನ ಜೀವನದ ಅತ್ಯಂತ ಕಠಿಣ ವಿಚಾರಣೆ: ಸೋಷಿಯಲ್ ಮೀಡಿಯಾಗೆ ಕಾಜೊಲ್ ಗುಡ್ ಬೈ; ಎಲ್ಲಾ ಪೋಸ್ಟ್ ಡಿಲೀಟ್
ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
Published: 09th June 2023 04:36 PM | Last Updated: 09th June 2023 06:53 PM | A+A A-

ಕಾಜೋಲ್
ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 14.4 ಮಿಲಿಯನ್ ಫಾಲೋವರ್ಗಳನ್ನು ಸಂಪಾದಿಸಿರುವ ಬಾಲಿವುಡ್ ಬೆಡಗಿ ಕಾಜೋಲ್ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಲು ಇಚ್ಛಿಸಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಬ್ರೇಕ್ ಘೋಷಿಸಿರುವ ಪೋಸ್ಟ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಹಾಕಿದ್ದಾರೆ.
ಈ ಕುರಿತು ಅವರು ಶುಕ್ರವಾರ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿ, ‘ನನ್ನ ಜೀವನದ ಕಠಿಣ ವಿಚಾರಣೆಗಳನ್ನು ಪ್ರಯೋಗಗಳಲ್ಲಿ ಒಂದನ್ನು ಎದುರಿಸುತ್ತಿದ್ದೇನೆ’ ಎಂದು ನಿಗೂಢವಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ನಟ ಅಜಯ್ ದೇವಗನ್ ಅವರ ಪತ್ನಿ ಹಾಗೂ ಎರಡು ಮಕ್ಕಳ ತಾಯಿಯಾಗಿರುವ ಕಾಜೋಲ್, ಸಾಮಾಜಿಕ ಮಾಧ್ಯಮಗಳಲ್ಲಿ ಯಾರಿಂದಾದರೂ ಶೋಷಣೆಗೆ ಒಳಗಾದರೇ? ಎಂಬ ಅನುಮಾನವನ್ನು ಅವರ ಪೋಸ್ಟ್ ಮೂಡಿಸುತ್ತಿದೆ ಎಂದು ಅನೇಕ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿಯ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕಿರುವ ಅವರು, ಟ್ವಿಟರ್, ಫೇಸ್‌ಬುಕ್ ಪೋಸ್ಟ್‌ಗಳನ್ನು ಅಳಿಸಿ ಹಾಕಿಲ್ಲ. ಅವರ ಈ ನಡೆಗೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿ, ನೀವು ಎಂತಹುದೇ ಪರಿಸ್ಥಿತಿ ಎದುರಿಸಲು ಸಮರ್ಥರಿದ್ದೀರಿ ಎಂದು ಧೈರ್ಯ ತುಂಬಿದ್ದಾರೆ.
ಕಾಜೋಲ್ ಅವರು ಫೇಸ್‌ಬುಕ್‌ನಲ್ಲಿ 2.8 ಕೋಟಿ, ಟ್ವಿಟರ್‌ನಲ್ಲಿ 38 ಲಕ್ಷ ಹಾಗೂ ಇನ್‌ಸ್ಟಾಗ್ರಾಂನಲ್ಲಿ 1.4 ಕೋಟಿ ಫಾಲೋವರ್ಸ್ ಇದ್ದಾರೆ. ಕಾಜೋಲ್ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಪ್ರಚಾರದ ಭಾಗವಾಗಿ ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತಿದ್ದಾರೆ ಎಂದು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಶಂಕಿಸಿದ್ದಾರೆ. ಇದು ಅವರ ಮುಂದಿನ OTT ಸರಣಿ 'ದಿ ಗುಡ್ ವೈಫ್'ನ ಪ್ರಚಾರದ ತಂತ್ರವಾಗಿದೆ ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ತಿಳಿಸಿದ್ದಾರೆ.