ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದ ಉರ್ಫಿ ಜಾವೇದ್! ವಿಡಿಯೋ

ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್ ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು  ವೈರಲ್ ಆಗಿದೆ.
ಉರ್ಫಿ ಜಾವೇದ್
ಉರ್ಫಿ ಜಾವೇದ್

ಮುಂಬೈ: ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್ ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು  ವೈರಲ್ ಆಗಿದೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಉರ್ಫಿ ಜಾವೇದ್, ಬಿದಿರಿನ ಟೋಕ್ರಿ (ಬುಟ್ಟಿ) ಯಿಂದ ತಯಾರಿಸಲಾದ ಡ್ರೆಸ್ ನಲ್ಲಿ ಫೋಸ್ ನೀಡಿದ್ದಾರೆ. ಈಗ ಅಸ್ವಿತ್ವ ಕಳೆದುಕೊಳ್ಳುತ್ತಿರುವ ಬಿದಿರಿನಿಂದ ಹೇಗೆ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಬರೆದುಕೊಂಡಿದ್ದಾರೆ.

ಕುಶಲ ಕರ್ಮಿಗಳು ಅದ್ಬುತವಾದ ಕುರ್ಚಿಗಳು, ಟೇಬಲ್ ತಯಾರಿಸಲು ಬಿದಿರಿನ ದಾರಗಳನ್ನು ಹೇಗೆ ಬಳಸುತ್ತಾರೆ ಎಂಬುದು ನನಗೆ ಯಾವಾಗಲೂ ಅಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ಮನಸ್ಸನ್ನು ಬೆಚ್ಚಿ ಬೀಳಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

 ಉರ್ಫಿಯ ಈ ಅವತಾರಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com