
ಬಾಲಿವುಡ್ ನಟಿ ಕಂಗನಾ ರಣಾವತ್
ಮುಂಬೈ: ಸಲಿಂಗ ವಿವಾಹಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟಿ ನಟಿ ಕಂಗನಾ ರಣಾವತ್ "ಹೃದಯಗಳು ಒಂದಾಗಿರುವಾಗ" ಜನರ ಆದ್ಯತೆಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ. ಮದುವೆಯನ್ನು ಪ್ರೀತಿಯ ಬಂಧನ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ಕಂಗನಾ ಬಣ್ಣಿಸಿದ್ದಾರೆ.
ಹರಿದ್ವಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ಮದುವೆಯು ಪ್ರೀತಿಯ ಬಂಧವಾಗಿದೆ. ಜನರ ಹೃದಯಗಳು ಒಂದಾಗಿರುವಾಗ, ಅವರ ಆದ್ಯತೆ ಏನು, ಎಂಬುದರ ಬಗ್ಗೆ ನಾವು ಏನು ಹೇಳಬಹುದು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೆಡ್ ನಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಐಡೆಂಟಿಟಿ ಅಲ್ಲ: ನಿಮ್ಮ ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತವಾಗಿರಲಿ!
ಸಲಿಂಗ ವಿವಾಹ ಬಗ್ಗೆ ಮಾತನಾಡಲು ಹೆಚ್ಚಿನ ತಾರೆಯರು ನಾಚಿಕೆಪಡುವ ಸಮಯದಲ್ಲಿ 'ಮದುವೆ ಸಮಾನತೆ''ಬೆಂಬಲಿಸಿದ್ದಕ್ಕಾಗಿ 2017 ರ ಸಿಮ್ರಾನ್ ಸಿನಿಮಾದ ಸಹ-ಲೇಖಕರಾದ ಅಪೂರ್ವ ಅಸ್ರಾಣಿ ಕಂಗನಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
A person 'cancelled' by the 'liberal' media has no right to an opinion right? Even if her statement is humane, brave & timely all at once? Kangana Ranaut speaks for #marriageequality. Something that most movie stars have been shy of doing. From one Queen to another, Thankyou https://t.co/dxE8TjmaYm
— Apurva (@Apurvasrani) May 1, 2023
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಐವರ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಲಿಂಗ ವಿವಾಹ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.