ಹೆಣ್ಣಿನ ದೇಹ ಅಮೂಲ್ಯ, ಮುಚ್ಚಿಕೊಂಡಷ್ಟು ಉತ್ತಮ: ಸಲ್ಮಾನ್ ಹೇಳಿಕೆಗೆ ನೆಟ್ಟಿಗರ ಕ್ಲಾಸ್!

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿನಿಮಾ ಜೊತೆಗೆ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಸದ್ಯ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಿನಿಮಾ ಜೊತೆಗೆ ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಸದ್ಯ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

'ಹೆಣ್ಣಿನ ದೇಹವು ಅಮೂಲ್ಯವಾಗಿದ್ದು, ಹೆಣ್ಣು ತನ್ನ ದೇಹವನ್ನು ಹೆಚ್ಚು ಮುಚ್ಚಿಕೊಂಡಷ್ಟು ಉತ್ತಮವಾಗಿರುತ್ತದೆ' ಎಂದು ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್ ಖಾನ್‌ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮವಾದ ‘ಆಪ್‌ ಕೀ ಅದಾಲತ್‘ ನ ಇತ್ತೀಚಿನ ಸಂಚಿಕೆಯಲ್ಲಿ ಸಲ್ಮಾನ್ ಭಾಗವಹಿಸಿದ್ದರು. ಈ ವೇಳೆ ಕೇಳಿದ ಹಲವು ಪ್ರಶ್ನೆಗಳಿಗೆ ಸಲ್ಮಾನ್‌ ಖಾನ್‌ ನೇರವಾಗಿ ಉತ್ತರಿಸಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಲ್ಮಾನ್ ಖಾನ್‌ ತಮ್ಮ ಸೆಟ್‌ನಲ್ಲಿ ಯಾವ ಹುಡಿಗಿಯೂ 'ಲೋ ನೆಕ್‌ಲೈನ್‌' ಬಟ್ಟೆ ಧರಿಸುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ಹಾಕಿದ್ದರು ಎಂಬ ವಿಷಯವನ್ನು ಸಂದರ್ಶನವೊಂದರಲ್ಲಿ ನಟಿ ಪಾಲಕ್‌ ತಿವಾರಿ ಬಹಿರಂಗಪಡಿಸಿದ್ದರು. ಈ ವಿಷಯ ಭಾರಿ ಚರ್ಚೆಗೂ ಒಳಗಾಗಿತ್ತು.

ಸಂದರ್ಶನದಲ್ಲಿ ಸಲ್ಮಾನ್ ಖಾನ್, 'ಮಹಿಳೆಯ ದೇಹ ಪವಿತ್ರವಾದುದು. ಅದನ್ನು ಎಷ್ಟು ಮುಚ್ಚಿಟ್ಟುಕೊಳ್ಳುತ್ತೀರೋ ಅಷ್ಟು ಉತ್ತಮ' ಎಂದು ಹೇಳಿದ್ದರು. 'ಸಮಸ್ಯೆ ಇರುವುದು ಹುಡುಗಿಯರಲ್ಲಿ ಅಲ್ಲ. ಸಮಸ್ಯೆ ಇರುವುದು ಹುಡುಗರಲ್ಲಿ. ನಿಮ್ಮ ತಾಯಿ, ತಂಗಿ, ಪತ್ನಿಯನ್ನು ಹುಡುಗರು ಆ ದೃಷ್ಟಿಯಿಂದ ನೋಡುವುದು ನನಗೆ ಇಷ್ಟ ಆಗುವುದಿಲ್ಲ' ಎಂದು ಸಲ್ಮಾನ್ ಖಾನ್ ಹೇಳಿದ್ದರು.

ಸಲ್ಮಾನ್ ಖಾನ್ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡಿದವರು ಮಹಿಳೆಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದೆಲ್ಲ ಬೂಟಾಟಿಕೆ ಮಾತುಗಳು ಎಂದು ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಕೆಲವು ನೀವು ಯಾಕೆ ಶರ್ಟ್ ತೆಗೆದುಕೊಂಡು ಓಡಾಡುತ್ತೀರಿ ಎಂದು ಕೇಳಿದ್ದಾರೆ. ಇನ್ನು ಕೆಲವರು ಸಲ್ಮಾನ್ ಪರ ವಾದಿಸುತ್ತಿದ್ದಾರೆ. ಸಲ್ಮಾನ್ ಖಾನ್ ಹೇಳಿದ್ದು ಸರಿ ಇದೆ ಎನ್ನುತ್ತಿದ್ದಾರೆ.

‘ಹೆಣ್ಣು ಯಾವ ಬಟ್ಟೆ ಧರಿಸಬೇಕೆಂದು ಒಬ್ಬ ಪುರುಷ ನಿರ್ಧರಿಸುವ ಅಗತ್ಯವಿಲ್ಲ‘ ಎಂದು ಹೇಳಿದ್ದಾರೆ. ತನ್ನ ಎಲ್ಲ ಸಿನಿಮಾದಲ್ಲಿಯೂ ಶರ್ಟ್‌ ಬಿಚ್ಚಿ ದೇಹದ ಮೇಲ್ಭಾಗವನ್ನು ಪ್ರದರ್ಶಿಸುವ ಪುರುಷನೊಬ್ಬ ಹೆಣ್ಣಿನ ಬಟ್ಟೆ ಬಗ್ಗೆ ಮಾತನಾಡುತ್ತಿರುವುದು ಕುಚೋದ್ಯವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com