
ನಟ ವರುಣ್ ಧವನ್
ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೆಕ್ಸಿಯೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ. ಅದೇ ರೀತಿಯಲ್ಲಿ ಶುಕ್ರವಾರ ಅವರು ಮತ್ತೊಮ್ಮೆ ತಮ್ಮ ದೇಹ ದೇಹದಾರ್ಢ್ಯವನ್ನು ಪ್ರದರ್ಶಿಸಿದ್ದಾರೆ. ಶರ್ಟ್ ಲೆಸ್ ಫೋಟೋವನ್ನು ಹಂಚಿಕೊಂಡಿರುವ ಧವನ್, ಅದಕ್ಕೆ 'ಬೇಸಿಗೆ ಮಗು' ಎಂಬ ಶೀರ್ಷಿಕೆ ನೀಡಿದ್ದಾರೆ.
ವರುಣ್ ಧವನ್ ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹಾಟ್ ಹಾಟ್ ಹಾಟ್ ಎಂದು ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ನೀವು ಫೈರ್ ಬೇಬಿ ಮತ್ತೋರ್ವ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಮಧ್ಯೆ ವರುಣ್ ಭಾರತೀಯ ವರ್ಸನ್ 'ಸಿಟಾಡೆಲ್' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಖ್ಯಾತ ಚಲನಚಿತ್ರ ನಿರ್ಮಾಪಕರಾದ ರಾಜ್ ಮತ್ತು ಡಿಕೆ ಸಿಟಾಡಲ್ ನಿರ್ಮಿಸುತ್ತಿದ್ದಾರೆ. ಇದಲ್ಲದೆ, ವರುಣ್ 'ಬವಾಲ್' ನಲ್ಲಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ‘ಭೇದ್ಯ 2’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.