ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆ!
ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ನಟನ ಶವ ಅಂಧೇರಿಯ ಅವರ ಮನೆಯ ಸ್ನಾನಗೃಹದಲ್ಲಿ ಪತ್ತೆಯಾಗಿದೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
Published: 22nd May 2023 07:14 PM | Last Updated: 22nd May 2023 07:14 PM | A+A A-

ಆದಿತ್ಯ ಸಿಂಗ್ ರಜಪೂತ್
ಮುಂಬೈ: ಕಿರುತೆರೆ ನಟ ಆದಿತ್ಯ ಸಿಂಗ್ ರಜಪೂತ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ನಟನ ಶವ ಅಂಧೇರಿಯ ಅವರ ಮನೆಯ ಸ್ನಾನಗೃಹದಲ್ಲಿ ಪತ್ತೆಯಾಗಿದೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮುಂಬೈನಲ್ಲಿ ಹೆಸರಾಂತ ನಟ, ರೂಪದರ್ಶಿ ಮತ್ತು ಕಾಸ್ಟಿಂಗ್ ಸಂಯೋಜಕ ಆದಿತ್ಯ ಸಿಂಗ್ ರಜಪೂತ್ ನನ್ನು ಆತನ ಸ್ನೇಹಿತ ಕಟ್ಟಡದ ಕಾವಲುಗಾರನ ಸಹಾಯದಿಂದ ಪಕ್ಕದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಮೃತಪಟ್ಟಿರುವುದಾಗಿ ಘೋಷಿಸದರು.
ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲವಾದರೂ, 'ಓವರ್ ಡೋಸ್" ಇದ್ದಿರಬಹುದು ಎಂದು ವರದಿಗಳು ಸೂಚಿಸುತ್ತವೆ. ಅವರ ನಿಧನದಿಂದ ನಟನ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಉಳಿದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮುಂಬೈ ಪೊಲೀಸರ ಒಶಿವಾರ ಪೊಲೀಸರ ತಂಡವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಶಂಕಿತರನ್ನು ಗುರುತಿಸಿದ ನಂತರ ಹೆಚ್ಚುವರಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆದಿತ್ಯ ಸಿಂಗ್ ರಜಪೂತ್ ರಾತ್ರಿಯನ್ನು ತಮ್ಮ ಸ್ನೇಹಿತರೊಂದಿಗೆ ಮನೆಯಲ್ಲಿಯೇ ಕಳೆದರು. ಅವರು ತಮ್ಮ ಅಪಾರ್ಟ್ಮೆಂಟ್ ನಲ್ಲಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 5 ಲಕ್ಷ 20 ಸಾವಿರ ಫಾಲೋವರ್ಸ್ ಇದ್ದಾರೆ. ಅವರ ಇತ್ತೀಚಿನ Instagram ಪೋಸ್ಟ್‌ನಲ್ಲಿ, ಐದು ದಿನಗಳ ಹಿಂದೆ, ಆದಿತ್ಯ ಸಿಂಗ್ ರಜಪೂತ್ ಸಂತೋಷದ ಬಗ್ಗೆ ಮಾತನಾಡುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
'ಸ್ಪ್ಲಿಟ್ಸ್ವಿಲ್ಲಾ' ಖ್ಯಾತಿಯ ನಟ ದೆಹಲಿಯಲ್ಲಿ ಜನಿಸಿದರು. ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಿತ್ಯ ಅವರ ಕುಟುಂಬವು ದೆಹಲಿಯಲ್ಲಿ ನೆಲೆಸಿದೆ. ಆದಿತ್ಯ ಸಿಂಗ್ ರಜಪೂತ್ ಮುಂಬೈನ ಸೆಲೆಬ್ರಿಟಿ ಸರ್ಕ್ಯೂಟ್‌ನಲ್ಲಿ ಜನಪ್ರಿಯರಾಗಿದ್ದರು ಮತ್ತು ಕಾಸ್ಟಿಂಗ್ ಸಂಯೋಜಕರಾಗಿ ಕೆಲಸ ಮಾಡಿದರು. ಅವರು 'ಮೈನೆ ಗಾಂಧಿ ಕೊ ನಹಿ ಮಾರಾ' ಮತ್ತು 'ಕ್ರಾಂತಿವೀರ್' ಚಿತ್ರಗಳಲ್ಲಿ ಕಾಣಿಸಿಕೊಂಡರು.
ಅವರು 'ಸ್ಪ್ಲಿಟ್ಸ್ವಿಲ್ಲಾ 9' ನಂತಹ ರಿಯಾಲಿಟಿ ಸರಣಿಯಲ್ಲಿ ಭಾಗವಹಿಸಿದರು ಮತ್ತು 'ಲವ್', 'ಆಶಿಕಿ', 'ಕೋಡ್ ರೆಡ್', 'ಆವಾಜ್ ಸೀಸನ್ 9', 'ಬ್ಯಾಡ್ ಬಾಯ್ ಸೀಸನ್ 4' ಮತ್ತು ಇತರ ಟಿವಿ ಯೋಜನೆಗಳಲ್ಲಿ ಕೆಲಸ ಮಾಡಿದರು. ಸುಮಾರು 300 ಜಾಹೀರಾತುಗಳನ್ನೂ ಮಾಡಿದ್ದಾರೆ.