ಜವಾನ್ ಆಸ್ಕರ್‌ಗೆ ಹೋಗಲಿ? ನಾನು ಶಾರುಖ್ ಖಾನ್ ಜೊತೆ ಮಾತನಾಡುತ್ತೇನೆ: ನಿರ್ದೇಶಕ ಅಟ್ಲೀ ಕುಮಾರ್

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. 

ವಿಶ್ವಾದ್ಯಂತ ಜವಾನ್ 850 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ 1000 ಕೋಟಿ ಕ್ಲಬ್ ಸೇರಲಿದೆ. ಜವಾನ್ ಚಿತ್ರವನ್ನು ಅಟ್ಲಿ ಕುಮಾರ್ ನಿರ್ದೇಶಿಸಿದ್ದು ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಜವಾನ್ ಚಿತ್ರವನ್ನು ಆಸ್ಕರ್‌ಗೆ ಕಳುಹಿಸಬೇಕು ಎಂದು ಅಟ್ಲೀ ಹೇಳಿದರು.

2020ರಲ್ಲಿ ಮೂರು ವರ್ಷಗಳ ಹಿಂದೆ, ನಾನು ಚಿತ್ರದ ಸ್ಕ್ರಿಪ್ಟ್ ಅನ್ನು ಶಾರುಖ್‌ಗೆ ವಿವರಿಸಿದೆ. ನಾನು ಚಿತ್ರದ ಸ್ಕ್ರಿಪ್ಟ್ ಅನ್ನು ಶಾರುಖ್‌ಗೆ ಜೂಮ್ ಕಾಲ್ ಮೂಲಕ ವಿವರಿಸಿದೆ. ನಾನು ಈ ರೀತಿ ಯಾರಿಗೂ ಹೇಳಿರಲಿಲ್ಲ ಆದರೆ ಆ ಸಮಯದಲ್ಲಿ ಲಾಕ್‌ಡೌನ್ ಇತ್ತು ಎಂದು ವಿವರಿಸಿದರು.

ಆಸ್ಕರ್ ಬಗ್ಗೆ ಅಟ್ಲಿ ಅವರನ್ನು ಕೇಳಿದಾಗ, 'ಎಲ್ಲವೂ ಸರಿಯಾದರೆ ಜವಾನ್ ಆಸ್ಕರ್‌ಗೆ ಹೋಗಬೇಕು. ಸಿನಿಮಾಗಾಗಿ ಕೆಲಸ ಮಾಡುವ ಪ್ರತಿಯೊಬ್ಬರೂ, ಪ್ರತಿಯೊಬ್ಬ ನಿರ್ದೇಶಕರು, ತಂತ್ರಜ್ಞರು ಗೋಲ್ಡನ್ ಗ್ಲೋಬ್, ಆಸ್ಕರ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳ ಮೇಲೆ ತಮ್ಮ ಕಣ್ಣೀಟ್ಟಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೂ ಆ ಆಸ್ಕರ್ ಪ್ರಶಸ್ತಿ ಸಿಗಬೇಕು. ನೋಡೋಣ, ಶಾರುಖ್ ಖಾನ್ ಗೆ ಫೋನ್ ಮಾಡಿ ಕೇಳುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com