ಮುಂಬೈ: ಕಿರಿಯ ಪುತ್ರ ಅಬ್ರಾಮ್ ಜೊತೆ 'ಲಾಲ್‌ಬಾಗ್ಚ ರಾಜಾ'ದಲ್ಲಿ ನಟ ಶಾರುಖ್ ಖಾನ್ ಪೂಜೆ!
ಸೂಪರ್‌ಸ್ಟಾರ್ ಶಾರುಖ್ ಖಾನ್ ಗುರುವಾರ ತಮ್ಮ ಕಿರಿಯ ಮಗ ಅಬ್ರಾಮ್ ಜೊತೆಗೆ ಮುಂಬೈನ ಪ್ರಸಿದ್ಧ 'ಲಾಲ್‌ಬೌಚ ರಾಜಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಲಾಲ್‌ಬೌಚ ರಾಜಾ ಮುಂಬೈನ ಲಾಲ್‌ಬಾಗ್‌ನಲ್ಲಿ ಇರಿಸಲಾಗಿರುವ ದೊಡ್ಡ ಗಣೇಶನ ವಿಗ್ರಹವಾಗಿದೆ.
Published: 21st September 2023 10:48 PM | Last Updated: 22nd September 2023 04:01 PM | A+A A-

ನಟ ಶಾರುಖ್ ಖಾನ್
ಮುಂಬೈ: ಸೂಪರ್‌ಸ್ಟಾರ್ ಶಾರುಖ್ ಖಾನ್ ಗುರುವಾರ ತಮ್ಮ ಕಿರಿಯ ಮಗ ಅಬ್ರಾಮ್ ಜೊತೆಗೆ ಮುಂಬೈನ ಪ್ರಸಿದ್ಧ 'ಲಾಲ್‌ಬಾಗ್ಚ ರಾಜಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಲಾಲ್‌ಬಾಗ್ಚ ರಾಜಾ ಮುಂಬೈನ ಲಾಲ್‌ಬಾಗ್‌ನಲ್ಲಿ ಇರಿಸಲಾಗಿರುವ ದೊಡ್ಡ ಗಣೇಶನ ವಿಗ್ರಹವಾಗಿದೆ.
ಪೂಜೆ ಸಂದರ್ಭದಲ್ಲಿ ಶಾರುಖ್ ಖಾನ್ ಬಿಳಿ ಶರ್ಟ್ ಧರಿಸಿದ್ದರೆ ಅವರ ಮಗ ಅಬ್ರಾಮ್ ಕೆಂಪು ಕುರ್ತಾದಲ್ಲಿ ಮುದ್ದಾಗಿ ಕಾಣುತ್ತಿದ್ದರು. ಸೂಪರ್‌ಸ್ಟಾರ್‌ನ ಹಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಗಣೇಶ ಚತುರ್ಥಿ ವಿಶೇಷ: ಮನೆಗೆ ಗಣಪತಿ ಮೂರ್ತಿ ತಂದ ಸೂಪರ್ ಸ್ಟಾರ್ ಶಾರುಖ್ ಖಾನ್!
ಪುಟ್ಲಬಾಯಿ ಚಾಲ್‌ನಲ್ಲಿರುವ 'ಲಾಲ್‌ಬಾಗ್ಚ ರಾಜಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣೇಶ ವಿಗ್ರಹ ಇತಿಹಾಸ ಪ್ರಸಿದ್ಧವಾಗಿದೆ. ಗಣೇಶ ಹಬ್ಬಕ್ಕೂ 10 ದಿನಗಳ ಮುಂಚೆ ಲಾಲ್‌ಬಾಗ್ಚ ರಾಜಾದ ಗಣೇಶ ಮೂರ್ತಿಯ ರೂಪವನ್ನು ಅನಾವರಣಗೊಳಿಸಲಾಗಿತ್ತು.