
ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ವಿವಾಹ (ಸಂಗ್ರಹ ಚಿತ್ರ)
ಜೈಪುರ: ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ, ನಟಿ ಪರಿಣಿತಿ ಚೋಪ್ರಾ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ.
ಉದಯ್ ಪುರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ಭಾನುವಾರ ಸಂಜೆ ಈ ಜೋಡಿಯ ವಿವಾಹ ನಡೆದಿದ್ದು, ಕುಟುಂಬ ಸದಸ್ಯರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.
ಮನೀಷ್ ಮಲ್ಹೋತ್ರಾ ಅವರು ವಿನ್ಯಾಸಗೊಳಿಸಿದ ಲೆಹಂಗಾ ಧರಿಸಿದ್ದರು. ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ವಿವಾಹದ ಫೋಟೊಗಳು ಇನ್ನಷ್ಟೇ ಮಾಧ್ಯಮಗಳಿಗೆ ಲಭ್ಯವಾಗಬೇಕಿದೆ.
ಮದುವೆಗೂ ಮುಂಚಿತವಾಗಿ ಶನಿವಾರ ರಾತ್ರಿ ಸಂಗೀತ ಕಾರ್ಯಕ್ರಮ ಕೂಡ ನಡೆದಿತ್ತು. ವಿವಾಹ ಕಾರ್ಯಕ್ರಮದ ವೀಡಿಯೋ ಎಎನ್ಐ ಗೆ ಲಭ್ಯವಾಗಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗಿಯಾಗಿದ್ದರು.
ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಮತ್ತು ಮನೀಶ್ ಮಲ್ಹೋತ್ರಾ ಕೂಡ ತಾರಾ ವಿವಾಹದಲ್ಲಿ ತಮ್ಮ ಉಪಸ್ಥಿತಿಯನ್ನು ಗುರುತಿಸಿದ್ದಾರೆ. ಪರಿಣಿತಿ ಅವರ ಸೋದರ ಸಂಬಂಧಿ ಮತ್ತು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಅವರು ಪರಿಣಿತಿ ಮತ್ತು ರಾಘವ್ ಅವರ ವಿವಾಹವನ್ನು ಮಿಸ್ ಮಾಡಿದ್ದಾರೆ. ಆದರೆ, ಪ್ರಿಯಾಂಕಾ ತಾಯಿ ಮಧು ಚೋಪ್ರಾ ಮದುವೆಯಲ್ಲಿ ಪಾಲ್ಗೊಂಡಿದ್ದರು.