ಓಶೋ ಜೀವನ ಚರಿತ್ರೆ ಕುರಿತ ಸಿನಿಮಾದಲ್ಲಿ ಆಮೀರ್ ಖಾನ್ ಮತ್ತು ಅಲಿಯಾ ಭಟ್?

Published: 29 Aug 2018 11:04 AM IST
ಆಮೀರ್ ಖಾನ್ ಮತ್ತು ಅಲಿಯಾ ಭಟ್
ಮುಂಬಯಿ: ಓಶೋ ಎಂದೇ ಪ್ರಖ್ಯಾತವಾಗಿರುವ  ದೇವಮಾನವ ಭಗವಾನ್ ರಜನೀಶ್ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದ್ದು, ಆಮಿರ್ ಖಾನ್ ಮತ್ತು ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಕುನ್ ಭಾತ್ರಾ ನಿರ್ದೇಶನದ ಈ ಸಿನಿಮಾ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಅಮೀರ್ ಖಾನ್ ಓಶೋ ಪಾತ್ರ ಮಾಡಲಿದ್ದಾರೆ,   ಅಲಿಯಾ  ಭಟ್  ದೇವನ ಮಾನವ ಓಶೋ ಅವರ ಸೆಕ್ರೆಟರಿ ಮಾ ಆನಂದ ಶೀಲಾ ಪಾತ್ರದಲ್ಲಿ ನಟಿಸಲಿದ್ದಾರೆ.

ವಿದೇಶಿ ನಟಿಯನ್ನು ಕರೆತರಲು ನಿರ್ಮಾಪಕರು ಯೋಜಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಂತರ ಅಲಿಯಾ ಅವರನ್ನು ಕರೆ ತರಲಾಗಿದೆ, ಆದರೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಅಲಿಯಾ ಸದ್ಯ ಗುಲ್ಲಿ ಬಾಯ್,  ಕಳಂಕ್, ತಕ್ತ್ ಮತ್ತು ಬ್ರಹ್ಮಾಸ್ತ್ರ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Posted by: SD | Source: The New Indian Express

ಈ ವಿಭಾಗದ ಇತರ ಸುದ್ದಿ